ನವದೆಹಲಿ : ಕೇಂದ್ರ ಸರ್ಕಾರ ಬೆಳ್ಳಂಬೆಳಗ್ಗೆ (ಮೇ 25) ದೇಶದ ವಾಹನ ಸವಾರರಿಗೆ ಶಾಕ್ ಕೊಟ್ಟಿದ್ದು, ಪೆಟ್ರೋಲ್ ಮೇಲಿನ ಬೆಲೆ ಪ್ರತಿ ಲೀಟರ್‌ಗೆ 2.61 ರೂ. ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 2.71 ರೂ. ಏರಿಕೆ ಮಾಡಿದೆ. ಇದು ಕಳೆದ 10 ದಿನಗಳಲ್ಲಿ 4ನೇ ಬಾರಿಗೆ ಮಾಡಿದ ದರ ಏರಿಕೆಯಾಗಿದೆ.
ಈವರೆಗೆ ಒಟ್ಟು ಪೆಟ್ರೋಲ್, ಡೀಸೆಲ್ ಲೀಟರ್ ಬೆಲೆಯಲ್ಲಿ 7 ರೂಪಾಯಿಗೂ ಹೆಚ್ಚು ಬೆಲೆ ಏರಿಕೆ ಕಂಡಿದೆ. ದೆಹಲಿಯಲ್ಲೀಗ ಪೆಟ್ರೋಲ್ ದರ 102.12 ರೂ, ಡೀಸೆಲ್ ಗೆ 95.20 ರೂ ಹೆಚ್ಚಳ ಆಗಿದೆ.
ಬೆಂಗಳೂರಲ್ಲಿ ಬೆಲೆ ಎಷ್ಟು?
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಪೆಟ್ರೋಲ್‌ಗೆ 2.83 ರೂ, ಹಾಗೂ ಡೀಸೆಲ್‌ಗೆ 2.81 ರೂ. ಹೆಚ್ಚಳ ಆಗಿದೆ. ಹೀಗಾಗಿ ಪೆಟ್ರೋಲ್ ಬೆಲೆ 110.89 ರೂ, ಡೀಸೆಲ್‌ಗೆ 98.80 ರೂ ತಲುಪಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಪೆಟ್ರೋಲ್ ಬೆಲೆ 111.19 ರೂ ಹಾಗೂ ಡೀಸೆಲ್ ಬೆಲೆ 99.08 ರೂ ದಾಖಲಾಗಿದೆ.
ಅಮೆರಿಕ-ಇರಾನ್ ಸಂಘರ್ಷದಿಂದಾಗಿ, ಹರ್ಮುಜ್ ಬಿಕ್ಕಟ್ಟಿನಿಂದ ಕಚ್ಚಾತೈಲ ದರ ಏರಿಕೆ, ಹಣದುಬ್ಬರದ ಸ್ಥಿತಿ ಹಾಗೂ ರೂಪಾಯಿ ಮೌಲ್ಯ ಕುಸಿತದಿಂದ ಆಮದು ವೆಚ್ಚ ಹೆಚ್ಚಳ ಆಗಿರುವ ಕಾರಣಕ್ಕೆ, ದೇಶದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಸತತವಾಗಿ ಏರಿಕೆಯಾಗುತ್ತಿದೆ..
ಇದನ್ನೂ ಓದಿ : ಮೃತರನ್ನೂ ಬಿಡದ ಕಳ್ಳರು : ಮಹಿಳೆ ಮೈಮೇಲಿದ್ದ 18 ಗ್ರಾಂ ಚಿನ್ನಾಭರಣಗಳು ಕಳವು



















