ಬೆಂಗಳೂರು: ಇತ್ತೀಚಿಗಷ್ಟೇ ಬೆಂಗಳೂರಿನಲ್ಲಿ ವಿದ್ಯುತ್ ದರ ಏರಿಕೆಯ ಕುರಿತು ಮಾತುಗಳು ಕೇಳಿ ಬರುತ್ತಿದ್ದವು. ಇದು ಇಂದು ಸತ್ಯವಾಗುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಇಂದು ಕೆಇಅರ್ ಸಿ ಕಚೇರಿಯಲ್ಲಿ ಹೈವೋಲ್ಟೆಜ್ ಮೀಟಿಂಗ್ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ದರ ಏರಿಕೆ ಬಗ್ಗೆ ಕೆಇಆರ್ ಸಿ ಕಚೇರಿಯಲ್ಲಿ ಸಭೆ ನಡೆಯಲಿದೆ.
ಈಗಾಗಲೇ ಬೆಸ್ಕಾಂ ದರ ಏರಿಕೆ ಬಗ್ಗೆ kerc ಗೆ ಪ್ರಸ್ತಾವನೆ ಸಲ್ಲಿಸಿದೆ. ಈಗಾಗಲೇ ವಿದ್ಯುತ್ ದರ ಏರಿಕೆಗೆ ಬೆಸ್ಕಾಂ ಸಕಲ ಸಿದ್ಧತೆ ಮಾಡಿಕೊಂಡಿದೆ. ಅದಕ್ಕಾಗಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(KERC)ಕ್ಕೆ ಬೆಸ್ಕಾಂ ಪ್ರಸ್ತಾವನೆ ಸಲ್ಲಿಸಿದೆ.
ಎಲ್ಲಾ ಮಾದರಿಯ ಬಳಕೆದಾರರ ವಿದ್ಯುತ್ ಏರಿಕೆಗೆ ಬೆಸ್ಕಾಂ ಪ್ರಸ್ತಾವನೆ ಸಲ್ಲಿಸಿದೆ. ಮುಂದಿನ 3 ವರ್ಷಗಳಿಗೆ ಅನ್ವಯ ಆಗುವಂತೆ ಬೆಲೆ ಏರಿಕೆಗೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ಹೀಗಾಗಿ ಇಂದಿನ ಸಭೆಯಲ್ಲಿ ದರ ನಿಗದಿಯಾಗುವ ಸಾಧ್ಯತೆ ಇದೆ.
ಬೆಸ್ಕಾಂ KERC ಗೆ ಸಲ್ಲಿಸಿರುವ ದರ ಏರಿಕೆ ಪ್ರಸ್ತಾವನೆಯಲ್ಲಿ ಏನಿದೆ?
2025-26 ನೇ ಹಣಕಾಸು ವರ್ಷಕ್ಕೆ ₹67 ಪೈಸೆ/ಯೂನಿಟ್
2026-27 ನೇ ಹಣಕಾಸು ವರ್ಷಕ್ಕೆ ₹75 ಪೈಸೆ/ಯೂನಿಟ್
2027-28 ನೇ ಹಣಕಾಸು ವರ್ಷಕ್ಕೆ ₹91 ಪೈಸೆ/ಯೂನಿಟ್



















