ಕದನ ವಿರಾಮ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ದೊಡ್ಡ ರಾಜತಾಂತ್ರಿಕ ಗೆಲುವು ಲಭಿಸಿದೆ. 22 ದಿನಗಳಿಂದ ಪಾಕ್ ವಶದಲ್ಲಿದ್ದ ಬಿಎಸ್ ಎಫ್ ಯೋಧನನ್ನ ಇದೀಗ ರಿಲೀಸ್ ಮಾಡಲಾಗಿದೆ. ಏಪ್ರಿಲ್ 23ರಂದು ಆಕಸ್ಮಿಕವಾಗಿ ಪಾಕಿಸ್ತಾನ ಗಡಿ ಪ್ರವೇಶಿಸಿದ್ದ ಪೂರ್ಣಂ ಕುಮಾರ್ ಸಿಂಗ್ ರನ್ನು ಇದೀಗ ಭಾರತಕ್ಕೆ ಹಸ್ತಾಂತರಿಸಲಾಗಿದೆ.

ವಾಘಾ-ಅಟ್ಟಾರಿ ಗಡಿ ಮೂಲಕ ಯೋಧನನ್ನು ಪಾಕ್ ರೇಂಜರ್ ಗಳು ಭಾರತಕ್ಕೆ ಹಸ್ತಾಂತರಿಸಿದ್ದಾರೆ. ಈ ಮೂಲಕ ಭಾರತಕ್ಕೆ ಬಲು ದೊಡ್ಡ ರಾಜತಾಂತ್ರಿಕ ಗೆಲುವು ಸಿಕ್ಕಂತಾಗಿದೆ. ಅಷ್ಟೇ ಅಲ್ಲಾ ಪಾಕಿಸ್ತಾನದ ವಶದಲ್ಲಿದ್ದ ಭಾರತೀಯ ಯೋಧನೋರ್ವ ಸುರಕ್ಷಿತವಾಗಿ ಇದೀಗ ತವರಿಗೆ ಮರಳಿದ್ದಾನೆ.