ಹಾಸನ : ಸುಮಾರು 15 ವರ್ಷಗಳ ಹಿಂದೆ ಜೈಲಿನಿಂದ ತಪ್ಪಿಸಿಕೊಂಡಿದ್ದ ವಿಚಾರಣಾಧೀನ ಕೈದಿಯನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸಕಲೇಶಪುರ ತಾಲೂಕಿನ ನಲ್ಲುಲ್ಲಿ ಗ್ರಾಮದ ಚನ್ನಕೇಶವ ಎಂದು ಗುರುತಿಸಲಾಗಿದೆ.
ಈತ ಕೊಲೆ ಯತ್ನ, ಲೈಂಗಿಕ ದೌರ್ಜನ್ಯ ಹಾಗೂ ದರೋಡೆ ಪ್ರಕರಣದಲ್ಲಿ ಸಕಲೇಶಪುರ ಜೈಲು ಸೇರಿದ್ದ. 2011ರಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಜೈಲಿಂದ ಪರಾರಿಯಾಗಿ ಸುಮಾರು 15 ವರ್ಷ ತಲೆಮರೆಸಿಕೊಂಡಿದ್ದ. ಇದೀಗ ಆರೋಪಿ ಗೋವಾದಲ್ಲಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ಆತನನ್ನು ಬಂಧಿಸಿದ್ದಾರೆ.
ಈತ ಮುಂಬೈ ಸೇರಿದಂತೆ ವಿವಿಧ ನಗರಗಳಲ್ಲಿ ಹೋಟೆಲ್‍ನಲ್ಲಿ ಕೆಲಸ ಮಾಡಿಕೊಂಡಿದ್ದ. ಬಳಿಕ ಗೋವಾದ (Goa) ಹೋಟೆಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಹೀಗಾಗಿ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸ್ ತಂಡ ಗೋವಾಕ್ಕೆ ಧಾವಿಸಿ, ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿ ಚನ್ನಕೇಶವನನ್ನು ವಶಕ್ಕೆ ಪಡೆದಿದೆ. ಸದ್ಯ ಆರೋಪಿಯನ್ನು ಹಾಸನಕ್ಕೆ ಕರೆತಂದು ಮತ್ತೆ ಜೈಲಿಗಟ್ಟಲಾಗಿದೆ.
ಇದನ್ನೂ ಓದಿ : ‘ಮಕ್ಕಳ ಕಳ್ಳ’ನೆಂದು ಮಾನಸಿಕ ಅಸ್ವಸ್ಥ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ!


















