ಬೆಂಗಳೂರು : ನಗರದಲ್ಲಿ ಮಾಡಿಫೈ ಕಾರ್‌ಗಳ ಕರ್ಕಶ ಶಬ್ದ ಹಾಗೂ ಸ್ಟಂಟ್‌ಗಳ ಹುಚ್ಚಾಟ ಮುಂದುವರಿದಿದ್ದು, ಟ್ರಾಫಿಕ್ ಪೊಲೀಸರ ಕ್ರಮಕ್ಕೂ ಲೆಕ್ಕಿಸದೆ ಪುಂಡರು ಅಟ್ಟಹಾಸ ಮೆರೆಯುತ್ತಿದ್ದಾರೆ.
ಿದೀಗ ಗುರುವಾರ ರಾತ್ರಿ ಸುಮಾರು 9:30ರ ವೇಳೆಗೆ ಡೈರಿ ಸರ್ಕಲ್‌ನಿಂದ ಜಯದೇವ ಆಸ್ಪತ್ರೆ ಕಡೆ ಸಾಗುವ ರಸ್ತೆಯಲ್ಲಿ ಮಾಡಿಫೈ ಕಾರೊಂದನ್ನು ವೇಗವಾಗಿ ಓಡಿಸಿದ ಚಾಲಕ ಭಾರೀ ಕರ್ಕಶ ಶಬ್ದ ಮಾಡುವ ಮೂಲಕ ಸಾರ್ವಜನಿಕರಿಗೆ ಆತಂಕ ಉಂಟುಮಾಡಿದ್ದಾನೆ.
ಮಾಡಿಫೈಡ್ ಸೈಲೆನ್ಸರ್‌ನಿಂದ ಬೆಂಕಿ ಹೊರಬರುವ ದೃಶ್ಯ ಕಂಡುಬಂದಿದ್ದು, ಅಕ್ಕಪಕ್ಕದ ವಾಹನ ಸವಾರರು ಬೆಚ್ಚಿಬಿದ್ದಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ : ಮಾರಕ ಬೌಲಿಂಗ್, ಮೊಬೈಲ್‌ನಲ್ಲಿ ಮನರಂಜನೆ ; ‘ರೀಲ್ಸ್ ಸ್ಟಾರ್’ ಅರ್ಶ್‌ದೀಪ್ ಮನದಾಳದ ಮಾತು!



















