ಬೆಂಗಳೂರು: ಹೂ ಮಾರಾಟದ ವಿಚಾರವಾಗಿ ಇಬ್ಬರು ಮಹಿಳೆಯರ ನಡುವೆ ಜಗಳ ಸಂಭವಿಸಿದ ಘಟನೆ ಹನುಮಂತನಗರದಲ್ಲಿ ನಡೆದಿದೆ. ಮಲ್ಲಿಗೆ ಹೂ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಮತ್ತೊಬ್ಬಳು ಪ್ರಶ್ನಿಸಿದ ಹಿನ್ನೆಲೆ ಮಾತಿನ ಚಕಮಕಿ ಜಗಳಕ್ಕೆ ತಿರುಗಿದೆ.
ಅಂಗಡಿ ಮುಂದೆ ಹೂ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಗುರಿಯಾಗಿಸಿಕೊಂಡು ಮತ್ತೊಬ್ಬ ಮಹಿಳೆ ಕಿರಿಕ್ ಮಾಡಿದ್ದಾಳೆ. ಈ ವೇಳೆ ಆಕ್ರೋಶಗೊಂಡ ಮಹಿಳೆ ಮಲ್ಲಿಗೆ ಹೂಗಳನ್ನು ರಸ್ತೆಗೆ ಬಿಸಾಕಿ ಉದ್ಧಟತನ ಪ್ರದರ್ಶಿಸಿದ್ದಾಳೆ ಎಂದು ತಿಳಿದುಬಂದಿದೆ.
ಜಗಳ ತಾರಕ್ಕೇರಿದ ಸಂದರ್ಭದಲ್ಲಿ “ಪೊಲೀಸ್ರಿಗಾದ್ರೂ ಹೇಳು, ಯಾರಿಗಾದರೂ ಹೇಳು” ಎಂದು ರಂಪಾಟ ನಡೆಸಿರುವ ದೃಶ್ಯಗಳು ಕಂಡುಬಂದಿವೆ. ಈ ಜಡೆ ಜಗಳದ ಸಂಪೂರ್ಣ ಘಟನೆ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆ ಹಿಡಿಯಲ್ಪಟ್ಟು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ : ಕುಡಿತದ ನಶೆಯೋ ಅಥವಾ ಡ್ರಗ್ಸ್ ನಶೆಯೋ? ನಡುರಸ್ತೆಯಲ್ಲೇ ಮೈ ಮೇಲೆ ಪ್ರಜ್ಞೆ ಇಲ್ಲದೇ ನಿಂತ ವ್ಯಕ್ತಿ



















