ಬೆಂಗಳೂರು: ಹುಡುಗ, ಹುಡುಗಿಯರ ಸರ್ವಿಸ್ ಬೇಕೆಂದು ಮೆಸೆಜ್ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು ಪೂರ್ವ ವಿಭಾಗ ಸೆನ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆನಂದ್ ಶರ್ಮಾ ಬಂಧಿತ ಆರೋಪಿ. ಈ ವ್ಯಕ್ತಿ ಹಲವಾರು ಮೊಬೈಲ್ ನಂಬರ್ ಬಳಸಿ, ಹುಡುಗಿಯರ ಸರ್ವಿಸ್ ಬೇಕಾ? ಎಂದು ಕರೆ ಮಾಡುತ್ತಿದ್ದ. ಈತ ಕರೆ ಮಾಡುತ್ತಿದ್ದ ಬಗ್ಗೆ ಸುಭಿ ಎಂಬ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮೊಬೈಲ್ ನಂಬರ್ ಆಧರಿಸಿ ಶೇಷಾದ್ರಿಪುರಂ ವಿ ಸ್ಟೇಜ್ ಪಿಜಿ ಬಳಿ ಆರೋಪಿಯನ್ನ ಪೂರ್ವ ವಿಭಾಗ CEN ಪೊಲೀಸರು ಬಂಧಿಸಿದ್ದಾರೆ. ಸದ್ಯ ಆ ಬಗ್ಗೆ ಪೊಲೀಸರು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಈ ರೀತಿಯ ದಂಧೆಕೋರರು ಬೆಂಗಳೂರಿನ ಸುತ್ತಲೂ ತುಂಬಿಕೊಂಡಿದ್ದಾರೆ. ಮರ್ಯಾದಸ್ಥರು ಮುಜುಗರ ಪಡುವಂಥ ಈ ರೀತಿಯ ಅನಾಮಿಕ ಕರೆಗಳು ಆಗಾಗ ಬರುತ್ತಿರುತ್ತೆ. ಆ ಬಗ್ಗೆ ಯಾರೂ ಪೊಲೀಸ್ ಠಾಣೆಯ ಸಹವಾಸ ಮಾಡಲು ಬಯಸದೇ, ಹಾಗೆಯೇ ಉಳಿದುಬಿಡುತ್ತಾರೆ. ಕೆಲವರು ಆ ಫೋನ್ ಕರೆಗೆ ಓಗೊಟ್ಟು ಹೇಸಿಗೆ ಎಬ್ಬಿಸಿಕೊಳ್ಳುತ್ತಾರೆ. ಸದ್ಯ ಮಹಿಳೆಯೊಬ್ಬರು ಧೈರ್ಯದಿಂದ ಪೊಲೀಸರಿಗೆ ಆ ಫೋನ್ ಕರೆಯ ಬಗ್ಗೆ ತಿಳಿಸಿ, ಆ ಒಬ್ಬ ಖದೀಮ ಅಂಧರ್ ಆಗುವಂತೆ ಮಾಡಿದ್ದಾರೆ. ಇನ್ನೂ ಅನೇಕ ದಂಧೆಕೋರರು ಹೊರಗಿದ್ದಾರೆ!!


















