ಬೆಂಗಳೂರು: ಪತಿಯ ಆನ್ ಲೈನ್ ಕ್ರಿಕೆಟ್ ಚಟಕ್ಕೆ ಪತ್ನಿ ಬಲಿಯಾಗಿರುವ ಘಟನೆ ನಡೆದಿದೆ.
ಈ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಬೆಟ್ಟಿಂಗ್ ನಲ್ಲಿ ಹಣ ತೊಡಗಿಸುವ ಸಲುವಾಗಿ ಪತಿ 1.5 ಕೋಟಿಗೂ ಹೆಚ್ಚು ಸಾಲ ಮಾಡಿದ್ದು, ಸಾಲ ಕೊಟ್ಟವರ ಕಿರುಕುಳ ಸಹಿಸದೆ ಪತ್ನಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೊಸದುರ್ಗದ ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ದರ್ಶನ್ ಬಾಬು ಎಂಬುವವರ ಪತ್ನಿ ರಂಜಿತಾ(24) ಆತ್ಮಹತ್ಯೆಗೆ ಶರಣಾದ ಮಹಿಳೆ. ಹೊಳಲ್ಕೆರೆಯಲ್ಲಿನ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಆಗಿದ್ದಾರೆ. ಸಾಲ ನೀಡಿದ ವ್ಯಕ್ತಿಯೇ ನನ್ನ ಸಾವಿಗೆ ಕಾರಣ ಎಂದು ಡೆತ್ ನೋಟ್ ಬರೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ 13 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಪತಿ ದರ್ಶನ್ ಮತ್ತು ತನಗೆ ಸಾಲ ನೀಡಿದವರು ಬಹಳ ಕಿರುಕುಳ ನೀಡುತ್ತಿದ್ದರು ಸಹಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಮೃತ ರಂಜಿತಾ ಬರೆದುಕೊಂಡಿದ್ದಾರೆ. ಈ ದಂಪತಿಗೆ 2 ವರ್ಷದ ಮಗು ಕೂಡ ಇದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಶಿವು, ಗಿರೀಶ್ ಮತ್ತು ವೆಂಕಟೇಶ್ ಬಂಧಿತರು. ಇನ್ನುಳಿದವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ದರ್ಶನ್ ಅವರು ಕ್ರಿಕೆಟ್ ಬೆಟ್ಟಿಂಗ್ ಗಾಗಿ 1.5 ಕೋಟಿ ರೂಪಾಯಿ ಸಾಲ ಮಾಡಿಕೊಂಡಿದ್ದರು. ಅದರಲ್ಲಿ ಬಹಳಷ್ಟು ಹಣ ಹಿಂದುರುಗಿಸಿದ್ದರು ಎನ್ನಲಾಗಿದೆ. ದಿಢೀರ್ ಶ್ರೀಮಂತನಾಗುವ ಆಸೆ ಹುಟ್ಟಿಸಿ, ಸಾಲಗಾರರೇ ಹಣ ನೀಡಿ, ಚಟಕ್ಕೆ ಬೀಳುವಂತೆ ಮಾಡಿದ್ದಾರೆ. ಬಳಿಕ ಬ್ಲ್ಯಾಕ್ ಚೆಕ್ ಅನ್ನು ಪಡೆದುಕೊಂಡು ಸಾಲ ನೀಡಿದ್ದರು. ಆದರೆ, ದರ್ಶನ್ ದರ್ಶನ್ 2021ರಿಂದ 2023ರವರೆಗೆ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಹಣ ಹಾಕಿ ಎಲ್ಲವನ್ನೂ ಕಳೆದುಕೊಂಡ. ಈ ಸಂದರ್ಭದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಗೆ ಐಡಿಯಾ ಜೊತೆ ಹಣವನ್ನು ಕೊಟ್ಟವರು ಹಣ ಹಿಂದುರುಗಿಸುವಂತೆ ದಂಪತಿಗೆ ಕಿರುಕುಳ ಕೊಟ್ಟಿದ್ದಾರೆ ಎಂದು ವೆಂಕಟೇಶ್ ಮಾಹಿತಿ ನೀಡಿದ್ದಾರೆ.



















