ನವದೆಹಲಿ: ನವೆಂಬರ್ 30ರಿಂದ ಡಿಸೆಂಬರ್ 3ರವರೆಗೆ ನಾಲ್ಕು ದಿನಗಳ ಕಾಲ ಸಂಸತ್ ವಿಶೇಷ ಅಧಿವೇಶನ ನಡೆಯಲಿದೆ. ಈ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆ ಮಸೂದೆ ಎಂಬ ಎರಡು ಬಿಲ್ಗಳನ್ನು ಪಾಸ್ ಮಾಡಲು ಎನ್ಡಿಎ ಸಿದ್ಧತೆ ನಡೆಸಿದೆ. ಮಹಿಳಾ ಮೀಸಲಾತಿಯನ್ನು ಶೇ. 33ಕ್ಕೆ ಹೆಚ್ಚಿಸುವ ಮತ್ತು ಲೋಕಸಭೆ ಸದಸ್ಯರ ಬಲವನ್ನು 850ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ.
ಈ ಮಸೂದೆಗಳಿಗೆ ಎಚ್.ಡಿ. ಕುಮಾರಸ್ವಾಮಿ ಮತ್ತು ಚಂದ್ರಬಾಬು ನಾಯ್ಡು ಜಂಟಿ ಬೆಂಬಲ ನೀಡಿದ್ದಾರೆ. ಈ ವಿಚಾರವಾಗಿ ಕೇಂದ್ರ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಕ್ಷೇತ್ರ ವಿಂಗಡಣೆ ಸಮರ ಏರ್ಪಟ್ಟಿದ್ದು, ದೇಶದ ರಾಜಕೀಯದಲ್ಲಿ ಇದು ಐತಿಹಾಸಿಕ ದಿನವಾಗಲಿದೆಯೇ ಎಂಬ ಕುತೂಹಲ ಮೂಡಿದೆ.
















