ಬೆಂಗಳೂರು: ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ರಾಜ್ಯದ ಜನತೆಗೆ ಶೀಘ್ರದಲ್ಲೇ ಸಿಹಿ ಸುದ್ದಿ ಸಿಗುವ ಸಾಧ್ಯತೆಯಿದೆ. ರಾಜ್ಯದ ಐದು ಎಸ್ಕಾಂಗಳ ಆರ್ಥಿಕ ಸ್ಥಿತಿ ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ ಗೃಹ ಬಳಕೆ ವಿದ್ಯುತ್ ದರ ಕಡಿಮೆಯಾಗುವ ನಿರೀಕ್ಷೆಯಿದೆ. ವಿದ್ಯುತ್ ಖರೀದಿಗೆ ಕಡಿಮೆ ಹಣ ವ್ಯಯಿಸಿರುವ ಕಾರಣ ಎಸ್ಕಾಂಗಳಿಗೆ ಹಣ ಉಳಿತಾಯವಾಗಿದೆ.
ಈ ಉಳಿತಾಯದ ಭಾಗವಾಗಿ 2027ರ ಏಪ್ರಿಲ್ನಲ್ಲಿ ಪ್ರತಿ ಯೂನಿಟ್ಗೆ ಹದಿನಾರು ಪೈಸೆ ದರ ಇಳಿಕೆ ಮಾಡಲು ಸಿದ್ಧತೆ ನಡೆದಿದೆ. ಕೆಇಆರ್ಸಿ ವಿದ್ಯುತ್ ದರ ಪರಿಶೀಲನೆ ನಡೆಸಿದ ಬಳಿಕ ದರ ಇಳಿಕೆಯಾಗಲಿದ್ದು, ಇದರಿಂದ ಗ್ರಾಹಕರಿಗೆ ಕೊಂಚ ಮಟ್ಟದಲ್ಲಿ ಹಣ ಉಳಿತಾಯವಾಗಲಿದೆ.



















