ರಾಮಾಯಣ ಸಿನಿಮಾ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 1500 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದೆ. ಈ ಸಿನಿಮಾ ಧುರಂಧರ್ 2 ಸೇರಿದಂತೆ ಇನ್ನೂ ಕೆಲವು ಸಿನಿಮಾಗಳ ದಾಖಲೆಯನ್ನು ಈಗಾಗಲೇ ಮುರಿದಿದೆ. ಆದರೆ 1500 ಕೋಟಿ ರೂಪಾಯಿ ಗಳಿಕೆಯ ಬಳಿಕ ಬಾಕ್ಸ್ ಆಫೀಸ್‌ನಲ್ಲಿ ಗಳಿಕೆ ತುಸು ನಿಧಾನವಾದಂತಿದೆ.14ನೇ ದಿನದಲ್ಲಿ 23.20 ಕೋಟಿ ರೂಪಾಯಿ ಗಳಿಸಿದ್ದ ಈ ಸಿನಿಮಾ, 15ನೇ ದಿನವಾದ ನಿನ್ನೆ 19.35 ಕೋಟಿ ರೂಪಾಯಿ ಮಾತ್ರ ಗಳಿಕೆ ಮಾಡಿದೆ. 2000 ಕೋಟಿ ರೂಪಾಯಿ ಗುರಿ ಹೊಂದಿರುವ ಈ ಸಿನಿಮಾಕ್ಕೆ ಇದು ಸಣ್ಣ ಮೊತ್ತವಾಗಿದೆ. ಈ ಮೂಲಕ ಸಿನಿಮಾದ ಒಟ್ಟು ಗಳಿಕೆ 1547 ಕೋಟಿ ರೂಪಾಯಿಗಳಾಗಿವೆ.
ಭಾರತದಾದ್ಯಂತ ಸಿನಿಮಾದ 21,437 ಶೋಗಳು ಪ್ರದರ್ಶನ ಆಗುತ್ತಿದ್ದು, ಹಿಂದಿಯಲ್ಲಿ 17 ಸಾವಿರಕ್ಕೂ ಹೆಚ್ಚು ಶೋಗಳಿವೆ. ನವೆಂಬರ್ 19ರಂದು ಹಿಂದಿ ಆವೃತ್ತಿ 14 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆ. ಕರ್ನಾಟಕದಲ್ಲಿ 1.40 ಕೋಟಿ, ತಮಿಳಿನಲ್ಲಿ 1.50 ಕೋಟಿ, ತೆಲುಗಿನಲ್ಲಿ 70 ಲಕ್ಷ ಮತ್ತು ಮಲಯಾಳಂ ಆವೃತ್ತಿ 1.75 ಕೋಟಿ ರೂಪಾಯಿ ಗಳಿಕೆ ಮಾಡಿದೆ. ದಕ್ಷಿಣ ಭಾರತದಲ್ಲಿ ಮಲಯಾಳಂ ಆವೃತ್ತಿ ಹೆಚ್ಚು ಹಣ ಗಳಿಕೆ ಮಾಡಿರುವುದು ಅಪರೂಪವಾಗಿದೆ. ಇಂದಿನಿಂದ ಮುಂದಿನ ಮೂರು ನಾಲ್ಕು ದಿನಗಳ ವಾರಾಂತ್ಯದಲ್ಲಿ ಕುಟುಂಬ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವ ಸಾಧ್ಯತೆಯಿರುವುದರಿಂದ ಗಳಿಕೆಯಲ್ಲಿ ಮತ್ತೆ ಹೆಚ್ಚಳ ಆಗುವ ನಿರೀಕ್ಷೆಯಿದೆ.
















