ಬೆಳಗ್ಗೆ 6 ಗಂಟೆಯಿಂದ ಪಿಂಕ್ ಲೈನ್ ಸಂಚಾರ ಆರಂಭವಾಗಿದೆ. ಕಾಳೇನ ಅಗ್ರಹಾರದಿಂದ ಸುದ್ದಗುಂಟೆಪಾಳ್ಯವರೆಗೆ ರೈಲು ಸಂಚರಿಸುತ್ತಿದೆ.
ಖುಷಿಯಿಂದ ಜನರು ಓಡೋಡಿ ಬಂದು ಮೆಟ್ರೋ ಹತ್ತಿದ್ದಾರೆ. ಮೆಟ್ರೋ ಸಿಬ್ಬಂದಿ ಜನರಿಗೆ ಗುಲಾಬಿ ಹೂವು ನೀಡಿದ್ದಾರೆ.
ಮೆಟ್ರೋ ರೈಲಿನಲ್ಲಿ ಲೈವ್ ಲೋಕೇಷನ್ ಟ್ರ್ಯಾಕಿಂಗ್ ವ್ಯವಸ್ಥೆ ಇದೆ. ಪಿಂಕ್ ಸೂಚನಾ ಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಲಾಗಿದೆ.

















