ರಾಜಾಜಿನಗರದಲ್ಲಿ ನಡೆದ ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕನ ಒಂದೊಂದೇ ವಿಚಾರಗಳು ಬಯಲಾಗುತ್ತಿವೆ. ಪೊಲೀಸ್ ವಿಚಾರಣೆಯ ವೇಳೆ ಆರೋಪಿ ಶೇಖರ್ ಕೃತ್ಯದ ಹಿಂದಿನ ಕಾರಣಗಳನ್ನು ಬಾಯ್ಬಿಟ್ಟಿದ್ದಾನೆ.
ಮಗಳಿಗೆ ಕೋಟ್ಯಂತರ ರೂಪಾಯಿ ಆಸ್ತಿಯ ಆಸೆ ತೋರಿಸಿ ಆಕೆಯನ್ನು ಕೃತ್ಯದಲ್ಲಿ ಭಾಗಿಯಾಗುವಂತೆ ಬ್ರೈನ್ ವಾಷ್ ಮಾಡಿದ್ದನು. ಶ್ರೀರಾಂಪುರದಲ್ಲಿ ಅಜ್ಜಿಯ 3 ರಿಂದ 4 ಕೋಟಿ ರೂಪಾಯಿ ಬೆಲೆಯ ಆಸ್ತಿಯಿದೆ ಎಂದು ಮಗಳಿಗೆ ಹೇಳಿದ್ದನು. ಅತ್ತೆ ಮತ್ತು ಮಾವಂದಿರು ಇದ್ದರೆ ಆಸ್ತಿಯಲ್ಲಿ ಅವರಿಗೂ ಪಾಲು ಹೋಗುತ್ತದೆ ಎಂದು ವಿವರಿಸಿದ್ದನು.
ಎಲ್ಲರನ್ನೂ ಮುಗಿಸಿಬಿಟ್ಟರೆ ಯಾರಿಗೂ ಪಾಲು ಸಿಗುವುದಿಲ್ಲ ಎಂದು ಹೇಳಿ ಮಗಳ ಮನಸ್ಸನ್ನು ಪರಿವರ್ತಿಸಿದ್ದನು. ತಂದೆ ಶೇಖರ್ ಮಾತನ್ನು ನಂಬಿದ ಮಗಳು ಈ ಕೃತ್ಯಕ್ಕೆ ಸಾಥ್ ನೀಡಿದ್ದಾಳೆ. ಸದ್ಯ ಪೊಲೀಸರು ಆರೋಪಿಯಿಂದ ಮತ್ತಷ್ಟು ವಿಚಾರಗಳನ್ನು ಬಾಯಿ ಬಿಡಿಸುತ್ತಿದ್ದಾರೆ.

















