ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಬೆಂಗಳೂರು

ಐದು ವರ್ಷ ತಡವಾಗಿ ಪಿಂಕ್ ಲೈನ್‌ಗೆ ಚಾಲನೆ; 21 ಕಿ.ಮೀ. ಮಾರ್ಗದಲ್ಲಿ ಈಗ ಸಂಚಾರ ಆರಂಭವಾಗುವುದು ಕೇವಲ 7.5 ಕಿ.ಮೀ.!

November 12, 2026
Metro: ಸಿಲಿಕಾನ್ ಸಿಟಿಗೂ ಎಂಟ್ರಿ ಕೊಟ್ಟ ಚಾಲಕ ರಹಿತ ಮೆಟ್ರೋ, ಶೀಘ್ರವೇ ಸಂಚಾರ ಆರಂಭ
Share on WhatsappShare on FacebookShare on Twitter

ಬೆಂಗಳೂರು: ಬಹುನಿರೀಕ್ಷಿತ ನಮ್ಮ ಮೆಟ್ರೋದ ಗುಲಾಬಿ ಮಾರ್ಗ (ಪಿಂಕ್ ಲೈನ್) ಮೊದಲ ಹಂತದ ಕಾರ್ಯಾರಂಭಕ್ಕೆ ಸಿದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 13ರಂದು ತಾವರೆಕೆರೆ ಮೆಟ್ರೋ ನಿಲ್ದಾಣದಲ್ಲಿ ಹೊಸ ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ. ಆದರೆ, ಈ ಉದ್ಘಾಟನೆಯ ಸಂಭ್ರಮದ ನಡುವೆ, ಯೋಜನೆಯ ಅನುಷ್ಠಾನದಲ್ಲಿ ಆಗಿರುವ ಭಾರಿ ವಿಳಂಬ ಈಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಬರೋಬ್ಬರಿ ಐದು ವರ್ಷಗಳ ಹಿಂದೆಯೇ ಪೂರ್ಣಗೊಳ್ಳಬೇಕಿದ್ದ ಯೋಜನೆಯ ಮೊದಲ ಹಂತವಷ್ಟೇ ಇದೀಗ ಸಾರ್ವಜನಿಕ ಬಳಕೆಗೆ ಮುಕ್ತವಾಗುತ್ತಿದ್ದು, ಯೋಜನೆಯ ಒಟ್ಟು ಉದ್ದದ ಕೇವಲ ಶೇ. 35ರಷ್ಟು ಮಾತ್ರ ಸಂಚಾರ ಆರಂಭಗೊಳ್ಳುತ್ತಿದೆ.

5 ವರ್ಷ ತಡವಾಗಿ ಸೇವೆ ಆರಂಭ, 35% ಮಾತ್ರ ಲಭ್ಯ

ನಮ್ಮ ಮೆಟ್ರೋದ ಎರಡನೇ ಹಂತದ ಯೋಜನೆಗೆ 2014ರ ಜನವರಿ 30ರಂದು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಗೊಟ್ಟಿಗೆರೆ (ಕಾಳೇನ ಅಗ್ರಹಾರ) ಮತ್ತು ನಾಗವಾರವನ್ನು ಬೆಸೆಯುವ 21.25 ಕಿ.ಮೀ. ಉದ್ದದ ಈ ಪಿಂಕ್ ಲೈನ್ ಯೋಜನೆಯನ್ನು ಆರಂಭದಲ್ಲಿ ಐದು ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. 2017ರಲ್ಲಿ ಸಿದ್ಧಪಡಿಸಿದ ವೇಳಾಪಟ್ಟಿಯ ಪ್ರಕಾರ, ಎತ್ತರಿಸಿದ ಮಾರ್ಗದ ಕಾಮಗಾರಿಯನ್ನು 2020ರ ಜುಲೈಗೆ, ಭೂಗತ ಮಾರ್ಗವನ್ನು 2020ರ ಡಿಸೆಂಬರ್‌ಗೆ ಮುಗಿಸಿ 2021ರ ಮೇ ತಿಂಗಳಿನಲ್ಲಿ ಸಂಪೂರ್ಣ ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸುವ ಗುರಿ ಇತ್ತು. ಆದರೆ, ಆ ಗುರಿ ಇದೀಗ ಐದೂವರೆ ವರ್ಷ ತಡವಾಗಿ, ನವೆಂಬರ್ 2026ಕ್ಕೆ ಮೊದಲ ಹಂತದ 7.5 ಕಿ.ಮೀ. ಮಾರ್ಗದಲ್ಲಿ ಮಾತ್ರ ಸಂಚಾರ ಆರಂಭವಾಗುತ್ತಿದೆ. ಅಂದರೆ 21.25 ಕಿ.ಮೀ. ಉದ್ದದ ಮಾರ್ಗದಲ್ಲಿ ಕೇವಲ ಶೇ.35ರಷ್ಟು ಮಾತ್ರ ಪ್ರಸ್ತುತ ಕಾರ್ಯಾರಂಭ ಮಾಡುತ್ತಿದ್ದು, ಉಳಿದ 13.76 ಕಿ.ಮೀ. ಭೂಗತ ಮಾರ್ಗ ಇನ್ನೂ ಪೂರ್ಣಗೊಂಡಿಲ್ಲ.

ಗುತ್ತಿಗೆದಾರರ ವೈಫಲ್ಯವೇ ವಿಳಂಬಕ್ಕೆ ಕಾರಣ

ಈ ಭಾರಿ ವಿಳಂಬಕ್ಕೆ ಪ್ರಮುಖ ಕಾರಣ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರ ವೈಫಲ್ಯ. 2017ರ ಸೆಪ್ಟೆಂಬರ್‌ನಲ್ಲಿ ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್ಸ್ ಸಂಸ್ಥೆಗೆ 7.5 ಕಿ.ಮೀ. ಉದ್ದದ ಎತ್ತರಿಸಿದ ಮಾರ್ಗದ ಕಾಮಗಾರಿಯನ್ನು 578.70 ಕೋಟಿ ರೂ. ವೆಚ್ಚದಲ್ಲಿ 27 ತಿಂಗಳ ಗಡುವಿನೊಂದಿಗೆ ನೀಡಲಾಗಿತ್ತು. 2019ರ ಅಂತ್ಯದ ವೇಳೆಗೆ ಮುಗಿಯಬೇಕಿದ್ದ ಕಾಮಗಾರಿ ನಿರೀಕ್ಷಿತ ವೇಗ ಪಡೆಯಲಿಲ್ಲ. 2021ರ ಆರಂಭದ ವೇಳೆಗೆ ಕೇವಲ ಶೇ.37ರಷ್ಟು ಮಾತ್ರ ಪೂರ್ಣಗೊಂಡಿತ್ತು. ಇದರಿಂದಾಗಿ ಬಿಎಂಆರ್‌ಸಿಎಲ್ ಗುತ್ತಿಗೆ ರದ್ದುಗೊಳಿಸಿ, ಆಗಸ್ಟ್ 2021ರಲ್ಲಿ ಮರುಟೆಂಡರ್ ಕರೆದು ಬೇರೆ ಗುತ್ತಿಗೆದಾರರಿಗೆ ವಹಿಸಬೇಕಾಯಿತು. ಇನ್ನು ಭೂಗತ ಮಾರ್ಗದಲ್ಲಿನ ಕಠಿಣ ಬಂಡೆಗಳು ಮತ್ತು ಸುರಂಗ ಕೊರೆಯುವ ಯಂತ್ರಗಳ ಕಾರ್ಯಾಚರಣೆಯಲ್ಲಾದ ಸವಾಲುಗಳು ಕಾಮಗಾರಿಯ ವೇಗಕ್ಕೆ ತಡೆಯೊಡ್ಡಿದವು.

ನವೆಂಬರ್ 14ರಿಂದ ಸಂಚಾರ ಆರಂಭ

ನವೆಂಬರ್ 13ರಂದು ಪ್ರಧಾನಿ ಮೋದಿಯವರು ತಾವರೆಕೆರೆಯಿಂದ ಐಐಎಂಬಿ ನಿಲ್ದಾಣದವರೆಗೆ ಮೆಟ್ರೋದಲ್ಲಿ ಸಂಚರಿಸಿ ಚಾಲನೆ ನೀಡಲಿದ್ದಾರೆ. ನವೆಂಬರ್ 14ರ ಬೆಳಿಗ್ಗೆ 6 ಗಂಟೆಯಿಂದ (ಭಾನುವಾರ 7 ಗಂಟೆ) ಕಾಳೇನ ಅಗ್ರಹಾರ ಮತ್ತು ತಾವರೆಕೆರೆ ನಿಲ್ದಾಣಗಳಿಂದ ಏಕಕಾಲದಲ್ಲಿ ರೈಲುಗಳ ವಾಣಿಜ್ಯ ಸಂಚಾರ ಆರಂಭವಾಗಲಿದೆ. ರಾತ್ರಿ 11 ಗಂಟೆಯವರೆಗೆ ಸೇವೆ ಲಭ್ಯವಿದ್ದು, ಆರಂಭದಲ್ಲಿ 5 ರೈಲುಗಳು ಪ್ರತಿ ಎಂಟು ನಿಮಿಷಕ್ಕೊಮ್ಮೆ ಕಾರ್ಯಾಚರಿಸಲಿವೆ.

ಭೂಗತ ಮಾರ್ಗಕ್ಕೆ ಇನ್ನೂ ಕಾಯಬೇಕು

ತಾವರೆಕೆರೆಯಿಂದ ನಾಗವಾರದವರೆಗಿನ 13.76 ಕಿ.ಮೀ. ಉದ್ದದ 12 ನಿಲ್ದಾಣಗಳ ಭೂಗತ ಮಾರ್ಗ ಕಾಮಗಾರಿ ಇನ್ನೂ ನಡೆಯುತ್ತಿದೆ. ಸುರಂಗ ಕಾಮಗಾರಿ 2024ರ ಅಕ್ಟೋಬರ್‌ಗೆ ಹಾಗೂ ಹಳಿ ಅಳವಡಿಕೆ 2026ರ ಮೇ ವೇಳೆಗೆ ಪೂರ್ಣಗೊಂಡಿದ್ದರೂ, ಸಿಗ್ನಲಿಂಗ್, ವಿದ್ಯುತ್, ದೂರಸಂಪರ್ಕ ಮತ್ತು ಸುರಕ್ಷತಾ ವ್ಯವಸ್ಥೆಗಳ ಅಳವಡಿಕೆ ಬಾಕಿ ಇದೆ. ಇತ್ತೀಚಿನ ವೇಳಾಪಟ್ಟಿಯ ಪ್ರಕಾರ ಈ ಮಾರ್ಗ 2027ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಸಂಪೂರ್ಣ ಮಾರ್ಗ ಪೂರ್ಣಗೊಂಡಾಗ ಮಾತ್ರ ಉತ್ತರ ಮತ್ತು ದಕ್ಷಿಣ ಬೆಂಗಳೂರಿನ ನಡುವೆ ನೇರ ಸಂಪರ್ಕ ಸಾಧ್ಯವಾಗಲಿದೆ. ಅಲ್ಲಿಯವರೆಗೆ ಬನ್ನೇರುಘಟ್ಟ ರಸ್ತೆ, ಹುಳಿಮಾವು, ಐಐಎಂಬಿ, ಜಯದೇವ ಆಸ್ಪತ್ರೆ ಮಾರ್ಗದ ಪ್ರಯಾಣಿಕರು ಮೊದಲ ಹಂತದ ಮೆಟ್ರೋ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ.

Tags: Bangalore InfrastructureBangalore Metro UpdateBengaluru Metro DelayBengaluru Metro Pink LineKarnataka transportMetro ConnectivityMetro Rail ProjectNamma MetroNews beatPink Line InaugurationPink Line Metro
SendShareTweet
Previous Post

ಹಿರಿಯೂರು ಉಪಚುನಾವಣೆ ಕಣಕ್ಕೆ ಕಳೆ: ಡಿ. ಸುಧಾಕರ್ ಕ್ಷೇತ್ರ ಉಳಿಸಿಕೊಳ್ಳಲು ಸಿಎಂ ಡಿ.ಕೆ. ಶಿವಕುಮಾರ್, ಸಚಿವ ರಘುಮೂರ್ತಿ ರಣತಂತ್ರ

Next Post

ಗೆಳೆಯ ಸಾಲ ಪಡೆಯಲು ನೀವು ಗ್ಯಾರಂಟಿ ಆದರೆ ಏನೆಲ್ಲ ರಿಸ್ಕ್? ಸಹಿ ಮಾಡುವ ಮುನ್ನ ಇವುಗಳನ್ನು ತಿಳಿಯಿರಿ

Related Posts

ಹಿರಿಯೂರು ಉಪಚುನಾವಣೆ ಕಣಕ್ಕೆ ಕಳೆ: ಡಿ. ಸುಧಾಕರ್ ಕ್ಷೇತ್ರ ಉಳಿಸಿಕೊಳ್ಳಲು ಸಿಎಂ ಡಿ.ಕೆ. ಶಿವಕುಮಾರ್, ಸಚಿವ ರಘುಮೂರ್ತಿ ರಣತಂತ್ರ
ರಾಜಕೀಯ

ಹಿರಿಯೂರು ಉಪಚುನಾವಣೆ ಕಣಕ್ಕೆ ಕಳೆ: ಡಿ. ಸುಧಾಕರ್ ಕ್ಷೇತ್ರ ಉಳಿಸಿಕೊಳ್ಳಲು ಸಿಎಂ ಡಿ.ಕೆ. ಶಿವಕುಮಾರ್, ಸಚಿವ ರಘುಮೂರ್ತಿ ರಣತಂತ್ರ

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ರೂ.38 ಕೋಟಿ‌ ವೆಚ್ಚದಲ್ಲಿ ಪ್ರವಾಸಿಗರ ಸ್ನೇಹಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ನೂತನ ಸೌಲಭ್ಯಗಳ ಉದ್ಘಾಟನೆ
ಬೆಂಗಳೂರು

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ರೂ.38 ಕೋಟಿ‌ ವೆಚ್ಚದಲ್ಲಿ ಪ್ರವಾಸಿಗರ ಸ್ನೇಹಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ನೂತನ ಸೌಲಭ್ಯಗಳ ಉದ್ಘಾಟನೆ

ಬಂಗಾರದ ಚೈನ್ ಕದ್ದಿದ್ದ ಕಳ್ಳನ ಬಂಧನ!
ಕೊಪ್ಪಳ

ಬಂಗಾರದ ಚೈನ್ ಕದ್ದಿದ್ದ ಕಳ್ಳನ ಬಂಧನ!

ಭೀಕರ ಅಪಘಾತಕ್ಕೆ ಯುವಕರಿಬ್ಬರು ಬಲಿ
ವಿಜಯನಗರ

ಅಪಘಾತಗಳಿಗೆ ನೂರಾರು ಜೀವ ಬಲಿ!

ಅಂಗವಿಕಲನಂತೆ ನಟಿಸಿ ಭಿಕ್ಷಾಟನೆ ನಡೆಸುತ್ತಿದ್ದವನಿಗೆ ಗೂಸಾ!
ತುಮಕೂರು

ಅಂಗವಿಕಲನಂತೆ ನಟಿಸಿ ಭಿಕ್ಷಾಟನೆ ನಡೆಸುತ್ತಿದ್ದವನಿಗೆ ಗೂಸಾ!

ಪಟಾಕಿ ಅಬ್ಬರಕ್ಕೆ ಬೆಂಗಳೂರಿನ ವಾಯುಮಾಲಿನ್ಯ ಏರಿಕೆ!
ಬೆಂಗಳೂರು

ಪಟಾಕಿ ಅಬ್ಬರಕ್ಕೆ ಬೆಂಗಳೂರಿನ ವಾಯುಮಾಲಿನ್ಯ ಏರಿಕೆ!

Next Post
ಗೆಳೆಯ ಸಾಲ ಪಡೆಯಲು ನೀವು ಗ್ಯಾರಂಟಿ ಆದರೆ ಏನೆಲ್ಲ ರಿಸ್ಕ್? ಸಹಿ ಮಾಡುವ ಮುನ್ನ ಇವುಗಳನ್ನು ತಿಳಿಯಿರಿ

ಗೆಳೆಯ ಸಾಲ ಪಡೆಯಲು ನೀವು ಗ್ಯಾರಂಟಿ ಆದರೆ ಏನೆಲ್ಲ ರಿಸ್ಕ್? ಸಹಿ ಮಾಡುವ ಮುನ್ನ ಇವುಗಳನ್ನು ತಿಳಿಯಿರಿ

  • Trending
  • Comments
  • Latest
ನ್ಯೂಜಿಲೆಂಡ್ ಏಕದಿನ ಸರಣಿಗೆ ಭಾರತ ತಂಡ ಪ್ರಕಟ: ಶುಭ್​ಮನ್ ಗಿಲ್, ಶ್ರೇಯಸ್ ಅಯ್ಯರ್​ಗೆ ನಾಯಕತ್ವದ ಹೊಣೆ

ನ್ಯೂಜಿಲೆಂಡ್ ಏಕದಿನ ಸರಣಿಗೆ ಭಾರತ ತಂಡ ಪ್ರಕಟ: ಶುಭ್​ಮನ್ ಗಿಲ್, ಶ್ರೇಯಸ್ ಅಯ್ಯರ್​ಗೆ ನಾಯಕತ್ವದ ಹೊಣೆ

5 ದಿನ, ಕೇವಲ 1 ದಿನದ ಅಭ್ಯಾಸ: ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಮ್ ಇಂಡಿಯಾದ ಬಿಡುವಿಲ್ಲದ ವೇಳಾಪಟ್ಟಿ ಬಗ್ಗೆ ಸಂಜು ಸ್ಯಾಮ್ಸನ್ ಕಳವಳ

5 ದಿನ, ಕೇವಲ 1 ದಿನದ ಅಭ್ಯಾಸ: ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಮ್ ಇಂಡಿಯಾದ ಬಿಡುವಿಲ್ಲದ ವೇಳಾಪಟ್ಟಿ ಬಗ್ಗೆ ಸಂಜು ಸ್ಯಾಮ್ಸನ್ ಕಳವಳ

‘8 ಬ್ಯಾಟರ್‌ಗಳ ತಂತ್ರ ಕೈಬಿಡಿ’: ಟೀಮ್ ಇಂಡಿಯಾ ಟಿ20 ತಂಡದಲ್ಲಿ ತುರ್ತು ಬದಲಾವಣೆಗೆ ಸುನಿಲ್ ಗವಾಸ್ಕರ್ ಆಗ್ರಹ

‘8 ಬ್ಯಾಟರ್‌ಗಳ ತಂತ್ರ ಕೈಬಿಡಿ’: ಟೀಮ್ ಇಂಡಿಯಾ ಟಿ20 ತಂಡದಲ್ಲಿ ತುರ್ತು ಬದಲಾವಣೆಗೆ ಸುನಿಲ್ ಗವಾಸ್ಕರ್ ಆಗ್ರಹ

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಸಾಲಗಾರರಿಗೆ ಶಾಕ್: ಎಂ.ಸಿ.ಎಲ್.ಆರ್ ಬಡ್ಡಿ ದರ ಏರಿಕೆ: ಹೋಮ್ ಲೋನ್ ಇಎಂಐ ಹೆಚ್ಚಳ!

ಸಾಲಗಾರರಿಗೆ ಶಾಕ್: ಎಂ.ಸಿ.ಎಲ್.ಆರ್ ಬಡ್ಡಿ ದರ ಏರಿಕೆ: ಹೋಮ್ ಲೋನ್ ಇಎಂಐ ಹೆಚ್ಚಳ!

ಜಿಲ್ಲಾ ನ್ಯಾಯಾಲಯದಲ್ಲಿ 30 ಪ್ಯೂನ್ ಹುದ್ದೆಗಳ ನೇಮಕಾತಿ: ಈ ಜಿಲ್ಲೆಯವರಿಗೆ ಒಳ್ಳೆಯ ಅವಕಾಶ

ಜಿಲ್ಲಾ ನ್ಯಾಯಾಲಯದಲ್ಲಿ 30 ಪ್ಯೂನ್ ಹುದ್ದೆಗಳ ನೇಮಕಾತಿ: ಈ ಜಿಲ್ಲೆಯವರಿಗೆ ಒಳ್ಳೆಯ ಅವಕಾಶ

ಗೆಳೆಯ ಸಾಲ ಪಡೆಯಲು ನೀವು ಗ್ಯಾರಂಟಿ ಆದರೆ ಏನೆಲ್ಲ ರಿಸ್ಕ್? ಸಹಿ ಮಾಡುವ ಮುನ್ನ ಇವುಗಳನ್ನು ತಿಳಿಯಿರಿ

ಗೆಳೆಯ ಸಾಲ ಪಡೆಯಲು ನೀವು ಗ್ಯಾರಂಟಿ ಆದರೆ ಏನೆಲ್ಲ ರಿಸ್ಕ್? ಸಹಿ ಮಾಡುವ ಮುನ್ನ ಇವುಗಳನ್ನು ತಿಳಿಯಿರಿ

Metro: ಸಿಲಿಕಾನ್ ಸಿಟಿಗೂ ಎಂಟ್ರಿ ಕೊಟ್ಟ ಚಾಲಕ ರಹಿತ ಮೆಟ್ರೋ, ಶೀಘ್ರವೇ ಸಂಚಾರ ಆರಂಭ

ಐದು ವರ್ಷ ತಡವಾಗಿ ಪಿಂಕ್ ಲೈನ್‌ಗೆ ಚಾಲನೆ; 21 ಕಿ.ಮೀ. ಮಾರ್ಗದಲ್ಲಿ ಈಗ ಸಂಚಾರ ಆರಂಭವಾಗುವುದು ಕೇವಲ 7.5 ಕಿ.ಮೀ.!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ತೆಲಂಗಾಣ
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಸಾಲಗಾರರಿಗೆ ಶಾಕ್: ಎಂ.ಸಿ.ಎಲ್.ಆರ್ ಬಡ್ಡಿ ದರ ಏರಿಕೆ: ಹೋಮ್ ಲೋನ್ ಇಎಂಐ ಹೆಚ್ಚಳ!

ಸಾಲಗಾರರಿಗೆ ಶಾಕ್: ಎಂ.ಸಿ.ಎಲ್.ಆರ್ ಬಡ್ಡಿ ದರ ಏರಿಕೆ: ಹೋಮ್ ಲೋನ್ ಇಎಂಐ ಹೆಚ್ಚಳ!

ಜಿಲ್ಲಾ ನ್ಯಾಯಾಲಯದಲ್ಲಿ 30 ಪ್ಯೂನ್ ಹುದ್ದೆಗಳ ನೇಮಕಾತಿ: ಈ ಜಿಲ್ಲೆಯವರಿಗೆ ಒಳ್ಳೆಯ ಅವಕಾಶ

ಜಿಲ್ಲಾ ನ್ಯಾಯಾಲಯದಲ್ಲಿ 30 ಪ್ಯೂನ್ ಹುದ್ದೆಗಳ ನೇಮಕಾತಿ: ಈ ಜಿಲ್ಲೆಯವರಿಗೆ ಒಳ್ಳೆಯ ಅವಕಾಶ

  • About
  • Advertise
  • Privacy & Policy
  • Contact Us

© 2025 News beat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 News beat