ಪಟಾಕಿ ಹೊಡೆತಕ್ಕೆ ಸಿಲಿಕಾನ್ ಸಿಟಿ ನಲುಗಿಹೋಗಿದ್ದು, ವಾಯುಮಾಲಿನ್ಯ ತೀವ್ರವಾಗಿ ಹೆಚ್ಚಾಗಿದೆ. ಪಟಾಕಿಯಿಂದಾಗಿ ನಗರದಲ್ಲಿ ಶೇಕಡಾ 30ರಷ್ಟು ವಾಯುಮಾಲಿನ್ಯ ಹೆಚ್ಚಳವಾಗಿದ್ದು, ಉಸಿರಾಟದ ವಾಯುಗುಣಮಟ್ಟವು 179ಕ್ಕೆ ಕುಸಿದಿದೆ. ಇದರಿಂದ ಮಕ್ಕಳು, ವೃದ್ಧರು ಹಾಗೂ ಉಸಿರಾಟದ ಸಮಸ್ಯೆ ಇರೋರಿಗೆ ತೀವ್ರ ತೊಂದರೆಯಾಗಿದೆ.
ನಗರದ ವಿವಿಧೆಡೆ ವಾಯುಗುಣಮಟ್ಟ ಕಳಪೆಯಾಗಿದ್ದು, ಸರ್ಜಾಪುರದಲ್ಲಿ 181, ಸಿಲ್ಕ್ ಬೋರ್ಡ್ನಲ್ಲಿ 160, ಕೋರಮಂಗಲದಲ್ಲಿ 186 ಇದೆ. ಹಾಗೆಯೇ ಲಾಲ್ ಬಾಗ್ ವೆಸ್ಟ್ ಗೇಟ್ ಬಳಿ 179, ರಿಚರ್ಡ್ ಟೌನ್ನಲ್ಲಿ 170 ಹಾಗೂ ವರ್ತೂರಿನಲ್ಲಿ 145ರಷ್ಟು ವಾಯುಗುಣಮಟ್ಟ ದಾಖಲಾಗಿದೆ.

















