ರಾಮಾಯಣ ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ ಎರಡೇ ದಿನಗಳಲ್ಲಿ ವಿಶ್ವಾದ್ಯಂತ 221.05 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.ದೇಶಾದ್ಯಂತ 23,316 ಪ್ರದರ್ಶನಗಳನ್ನು ಈ ಸಿನಿಮಾ ಕಂಡಿದೆ. ಎರಡನೇ ದಿನ ಭಾರತದಲ್ಲಿ ಒಟ್ಟು 48.05 ಕೋಟಿ ರೂಪಾಯಿ ನೆಟ್ ಗಳಿಕೆ ಮಾಡಿದೆ. ಭಾರತದಲ್ಲಿ ಇದುವರೆಗೆ ಒಟ್ಟು 134.80 ಕೋಟಿ ಗ್ರಾಸ್ ಹಾಗೂ 112.90 ಕೋಟಿ ನೆಟ್ ಸಂಗ್ರಹವಾಗಿದೆ.
ಭಾಷಾವಾರು ಗಳಿಕೆಯಲ್ಲಿ ಹಿಂದಿ ಆವೃತ್ತಿ 35.50 ಕೋಟಿ ಗಳಿಸಿದೆ. ಕನ್ನಡ ಆವೃತ್ತಿ 5.15 ಕೋಟಿ ಹಾಗೂ ತೆಲುಗು ಆವೃತ್ತಿ 4.75 ಕೋಟಿ ಗಳಿಸಿವೆ. ತಮಿಳು ಆವೃತ್ತಿ 1.50 ಕೋಟಿ ಹಾಗೂ ಮಲಯಾಳಂ ಆವೃತ್ತಿ 1.15 ಕೋಟಿ ರೂಪಾಯಿ ಗಳಿಕೆ ಮಾಡಿವೆ.ವಿದೇಶಿ ಮಾರುಕಟ್ಟೆಯಲ್ಲಿ ಎರಡನೇ ದಿನ 35.00 ಕೋಟಿ ಸೇರಿ ಒಟ್ಟು 86.25 ಕೋಟಿ ಗ್ರಾಸ್ ಸಂಗ್ರಹವಾಗಿದೆ. ಶುಕ್ರವಾರವಾಗಿದ್ದರಿಂದ ಸಣ್ಣ ಕುಸಿತ ಕಂಡುಬಂದಿದೆ. ವಾರಾಂತ್ಯದ ರಜೆಗಳು ಹಾಗೂ ಹಬ್ಬದ ಸಾಲು ಸಾಲು ರಜೆಗಳಿಂದ ಗಳಿಕೆ ಹೆಚ್ಚಾಗುವ ನಿರೀಕ್ಷೆಯಿದೆ.
















