ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಕನ್ನಡ ರಾಜ್ಯೋತ್ಸವದಂದು ಹೇಳಿಕೆ ನೀಡಿದ್ದ ಸಚಿವ ಚಲುವರಾಯಸ್ವಾಮಿ ವಿರುದ್ಧ ದಳಪತಿಗಳ ಶೈಲಿಯಲ್ಲಿ ಭಾರಿ ವಾಗ್ದಾಳಿ ನಡೆಸಿದ್ದಾರೆ.
ರಾಜಕೀಯದಲ್ಲಿ ತಾನು ಹಿರಿಯ ಎಂಬುದನ್ನು ನೆನಪಿಸಿದ ಅವರು, ನಾಯಕರಾದವರು ನಡೆದು ಬಂದ ದಾರಿ ಸ್ಮರಿಸಬೇಕು. ಅಸಮಾಧಾನಗೊಂಡಿದ್ದ ಚಲುವರಾಯಸ್ವಾಮಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದು ಹೆಚ್ಡಿಕೆ ಎಂಬುದನ್ನು ಮರೆಯಬಾರದು ಎಂದಿದ್ದಾರೆ.



















