ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರನ್ನ ‘ಹಳ್ಳಿ ಗುಗ್ಗು’ ಎಂದಿದ್ದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ಇದೀಗ ಅವರಿಗೆ ಭಾರಿ ಡ್ಯಾಮೇಜ್ ಉಂಟುಮಾಡುವ ಸಾಧ್ಯತೆ ಇದೆ.
ಈ ಹೇಳಿಕೆ ವಿರುದ್ಧ ಜೆಡಿಎಸ್ ಶಾಸಕರು, ಪರಿಷತ್ ಸದಸ್ಯರು ಮತ್ತು ಸಂಸದರು ಒಟ್ಟಾಗಿ ‘ನಾನು ಹಳ್ಳಿ ಗುಗ್ಗು’ ಎಂಬ ಬೃಹತ್ ಅಭಿಯಾನ ಆರಂಭಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಗ್ರಾಮೀಣ ಭಾಗದ ಜನರನ್ನು ಅವಮಾನಿಸಿದ್ದಾರಾ ಎಂಬ ಪ್ರಶ್ನೆ ಮೂಡಿದ್ದು, ಈ ರಾಜ್ಯದ ಸಿಎಂ ಸೇರಿದಂತೆ ಹಲವು ಸಚಿವರು ಹಾಗೂ ಶಾಸಕರು ಹಳ್ಳಿಯಿಂದಲೇ ಬಂದಿರೋದು ಎಂದು ದಳಪತಿಗಳು ತಿರುಗೇಟು ನೀಡಿದ್ದಾರೆ.
ಮಾತಿನ ಬರದಲ್ಲಿ ಮಾತನಾಡಿ ಗ್ರಾಮೀಣ ಭಾಗದ ಜನರ ಕೆಂಗಣ್ಣಿಗೆ ಗುರಿಯಾಗಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ತಲೆದಂಡಕ್ಕೆ ಆಗ್ರಹಿಸಿ ದಳಪತಿಗಳು ಹೋರಾಟಕ್ಕೆ ಇಳಿದಿದ್ದಾರೆ.


















