ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ್ದು, ಶಾಲೆಯೊಂದು ಧ್ವಂಸಗೊಂಡು 29 ಮಂದಿ ಮೃತಪಟ್ಟಿದ್ದಾರೆ.ಅಮೆರಿಕದ ಮಧ್ಯಸ್ಥಿಕೆಯಲ್ಲಿ ಮಾತುಕತೆಗಳು ನಡೆಯಲಿರುವ ಹೊತ್ತಲ್ಲೇ ರಷ್ಯಾ ನಡೆಸಿದ ಈ ಮಾರಣಾಂತಿಕ ದಾಳಿಗಳನ್ನು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತೀವ್ರವಾಗಿ ಖಂಡಿಸಿದ್ದಾರೆ.
ಮಂಗಳವಾರ ಖಾರ್ಕಿವ್ನಲ್ಲಿ ರಷ್ಯಾ ಆಸ್ಪತ್ರೆಯೊಂದರ ಮೇಲೆ ದಾಳಿ ನಡೆಸಿದ್ದು, ಇದರಲ್ಲಿ 73 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.


















