ಐಟಿ-ಬಿಟಿ ಕಂಪನಿಗಳಲ್ಲಿ ಉದ್ಯೋಗ ನೀಡಿದ ಮಾಹಿತಿ ಸಂಗ್ರಹಿಸಲು ಕರವೇ ಮುಖಂಡರು ಮುಂದಾಗಿದ್ದಕ್ಕೆ ಕನ್ನಡಿಗ ಮೋಹನ್‌ದಾಸ್ ಪೈ ವಿರೋಧ ವ್ಯಕ್ತಪಡಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಎಂಗೆ ಪತ್ರ ಬರೆದಿದ್ದಾರೆ. ಪೈ ಅವರ ಈ ನಡೆಗೆ ಕರವೇ ಅಧ್ಯಕ್ಷ ನಾರಾಯಣಗೌಡ ತೀವ್ರ ವಾಗ್ದಾಳಿ ನಡೆಸಿದ್ದು, “ಮೋಹನ್‌ದಾಸ್ ಪೈ ಒಬ್ಬ ಅರೆಹುಚ್ಚ, ಮಹಾಭಾರತದ ಶಕುನಿ ಇದ್ದಂತೆ” ಎಂದು ಕಿಡಿಕಾರಿದ್ದಾರೆ.
ಪೈ ವಿರೋಧದ ನಡುವೆಯೂ ಕರವೇ ಕಾರ್ಯಕರ್ತರು 112 ಕಂಪನಿಗಳಿಗೆ ಭೇಟಿ ನೀಡಿದ್ದು, ಕನ್ನಡಿಗರಿಗೆ ಉದ್ಯೋಗ ನೀಡಿರುವ ಮಾಹಿತಿ ನೀಡಲು ಐಟಿ-ಬಿಟಿ ಕಂಪನಿಗಳಿಗೆ ಒಂದು ವಾರದ ಗಡುವು ನೀಡಿದ್ದಾರೆ.



















