ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಜೆಪಿ ಪಾರ್ಕ್ನಲ್ಲಿ ಕಿಡಿಗೇಡಿಗಳು ರಾತ್ರೋರಾತ್ರಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದಾರೆ. ಪಾರ್ಕ್ನಲ್ಲಿ ಜನರು ಕುಳಿತುಕೊಳ್ಳಲು ಹಾಕಲಾಗಿದ್ದ ಕಲ್ಲಿನ ಬೆಂಚ್ಗಳನ್ನು ಅನಾಮಿಕರು ಮುರಿದು ಹಾಕಿದ್ದಾರೆ.
ನಿನ್ನೆ ಸಂಜೆವರೆಗೆ ಚೆನ್ನಾಗಿದ್ದ ಕಲ್ಲಿನ ಬೆಂಚ್ಗಳು ಇಂದು ಬೆಳಿಗ್ಗೆ ವೇಳೆಗೆ ಪುಡಿಪುಡಿಯಾಗಿದ್ದು, 15ಕ್ಕೂ ಹೆಚ್ಚು ಬೆಂಚ್ಗಳನ್ನು ಹಾನಿಗೊಳಿಸಲಾಗಿದೆ. ಬೆಂಗಳೂರಿನ ದೊಡ್ಡ ಪಾರ್ಕ್ನಲ್ಲಿ ಒಂದಾಗಿರುವ ಜೆಪಿ ಪಾರ್ಕ್ನಲ್ಲಿ ಈ ಘಟನೆ ನಡೆದಿದ್ದು, ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿಯೇ ಈ ಕೃತ್ಯ ಎಸಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.


















