ರಾಮನಗರದಲ್ಲಿ ‘ನಿಶಾ ಒಂದು ಆಲೋಚನೆ’ ಸಂಸ್ಥೆಯ ಟ್ರಸ್ಟಿ ನಿಶಾ ಯೋಗೇಶ್ವರ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಕಳೆದ ಅಕ್ಟೋಬರ್ 31 ರಂದು ತಮ್ಮ ಸಂಸ್ಥೆಯಿಂದ ಚನ್ನಪಟ್ಟಣದ ನಾಗವಾರ ಗ್ರಾಮದಲ್ಲಿ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. ಅಕ್ಟೋಬರ್ 9 ರಂದು ಈ ಕುರಿತು ಅನುಮತಿ ಪಡೆದಿದ್ದರೂ, ಅಕ್ಟೋಬರ್ 30 ರಂದು ಅನುಮತಿ ನಿರಾಕರಿಸಲಾಗಿತ್ತು.
ಈ ಹಿನ್ನೆಲೆ ಜಿಲ್ಲಾಧಿಕಾರಿ ಭೇಟಿ ಮಾಡಿದ ನಂತರ ಮತ್ತೆ ಕಾರ್ಯಕ್ರಮಕ್ಕೆ ಅನುಮತಿ ದೊರೆತಿತ್ತು. ಸಮಾಜಮುಖಿ ಕಾರ್ಯಕ್ರಮಗಳನ್ನು ಚನ್ನಪಟ್ಟಣ ಸೇರಿ ಎಲ್ಲಾ ಕಡೆ ಮುಂದುವರಿಸಲಿದ್ದು, ಶಾಸಕರಾಗಲಿ ಅಥವಾ ಅಧಿಕಾರಿಗಳಾಗಲಿ ತಮಗೆ ತೊಂದರೆ ಕೊಡಬಾರದು ಎಂದು ನಿಶಾ ಯೋಗೇಶ್ವರ್ ಮನವಿ ಮಾಡಿದ್ದಾರೆ.



















