ಬೆಂಗಳೂರಿನ ರಸ್ತೆಯಲ್ಲಿ ಗುಂಡಿಯಲ್ಲ, ಬದಲಾಗಿ ಬೃಹತ್ ಗಾತ್ರದ ದೊಡ್ಡ ಹಳ್ಳವೇ ಬಿದ್ದಿದ್ದರೂ ಜಿಬಿಎ ಮಾತ್ರ ಡೋಂಟ್ ಕೇರ್ ಎನ್ನುತ್ತಿದೆ. ಸಿಲಿಕಾನ್ ಸಿಟಿಯಲ್ಲಿನ ರಸ್ತೆಗಳ ಈ ಅಧ್ವಾನಕ್ಕೆ ಜಿಬಿಎ ಅಂತ್ಯ ಹಾಡುವುದು ಯಾವಾಗ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ನಾಗರಬಾವಿ ಬಳಿಯ ಮಲ್ಲತ್ತಹಳ್ಳಿ ಸಮೀಪದ ಸೆಂಟ್ ಸೋಫಿಯಾ ಶಾಲೆಯ ಬಳಿಯ ನಡು ರಸ್ತೆಯಲ್ಲೇ ಈ ಡೆಡ್ಲಿ ಹಳ್ಳ ನಿರ್ಮಾಣವಾಗಿದೆ. ರಸ್ತೆಗೆ ಹಾಕಿದ್ದ ಡಾಂಬರು ಸಂಪೂರ್ಣವಾಗಿ ಪಾತಾಳ ಕಾಣುವ ರೀತಿಯಲ್ಲಿ ಕುಸಿದು ಬಿದ್ದಿದ್ದು, ಭೀಕರ ರಸ್ತೆ ಅವಾಂತರ ಸೃಷ್ಟಿಯಾಗಿದೆ.



















