ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ನ ಬನಸ್ಕಾಂತದಲ್ಲಿ ಮೆಗಾ ರ್ಯಾಲಿ ಹಾಗೂ ಭವ್ಯ ರೋಡ್ ಶೋ ನಡೆಸಿದ್ದು, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಒಟ್ಟು 14 ಸಾವಿರ ಕೋಟಿ ರೂ. ಮೌಲ್ಯದ ನಾನಾ ಅಭಿವೃದ್ಧಿ ಯೋಜನೆಗಳಿಗೆ ‘ನಮೋ’ ಚಾಲನೆ ದೊರೆತಿದೆ.
ಇದೇ ವೇಳೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣವನ್ನು ಬಿಡುಗಡೆ ಮಾಡಲಾಗಿದ್ದು, ದೇಶದ ರೈತರಿಗೆ 24ನೇ ಕಂತಿನ 19 ಸಾವಿರ ಕೋಟಿ ರೂ. ಹಣವನ್ನು ಖಾತೆಗೆ ರಿಲೀಸ್ ಮಾಡಲಾಗಿದೆ.

















