ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಮಂಗನ ಕೈಗೆ ಮಾಣಿಕ್ಯ ಸಿಕ್ಕರೆ ಏನಾಗುತ್ತದೆ, ಗೃಹ ಇಲಾಖೆಯ ದುಸ್ಥಿತಿ ಹಂಗಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಿಸ್ಟರ್ ತುಘಲಕ್ ಕೈಗೆ ಸಿಕ್ಕಿ ಪೊಲೀಸರು ಹೈರಾಣಾಗಿದ್ದಾರೆ ಎಂದು ನೇರ ಸವಾಲ್ ಎಸೆದಿದ್ದಾರೆ. ವಿಷಯಾಂತರ ಮಾಡುವುದು ಕಿಡಿಗೇಡಿಗಳ ಲಕ್ಷಣ ಎಂದು ಗುಡುಗಿದ್ದಾರೆ.
ವಿಷಯ ಬಿಟ್ಟು ಮಿಕ್ಕಿದ್ದೆಲ್ಲಾ ಏಕೆ, ನೇರವಾಗಿ ಯುದ್ಧ ಮಾಡಿ, ಪಲಾಯನ ಮತ್ತು ಪಡಿಪಾಟಲು ಯಾಕೆ ಎಂದು ಪ್ರಶ್ನಿಸಿದ್ದಾರೆ. ಪ್ರಕರಣದ ದಿಕ್ಕು ತಪ್ಪಿಸಲು ಎಷ್ಟೊಂದು ಬಸ್ಕಿ ಹೊಡೆಯುತ್ತಿದ್ದೀರಿ. ನೀವು, ನಿಮ್ಮಪ್ಪ ಹಾಗೂ ಸಿಎಂ ಹೊಸೆದ ಕುತಂತ್ರಕ್ಕೆ ಬಲಿಯಾದವರಿಗೇ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಕಿಡಿಗೇಡಿತನ ಬಯಲು ಮಾಡಿದ್ದಾರೆ. ಕ್ಲೀನ್ ಚಿಟ್ ನಿಮ್ಮ ಪಾಪಕ್ಕೆ ಪ್ರಾಯಶ್ಚಿತ್ತವಲ್ಲ ಎಂದು ಆರ್ಭಟಿಸಿರುವ ಕುಮಾರಸ್ವಾಮಿ, ಇಂತಹ ಐನಾತಿ ಐಡಿಯಾ ಮಾಡಿದ ಅತಿಜಾಣ ಗ್ರಹಣ ಮಂತ್ರಿಯ ತನಿಖೆಯೇ ಸ್ಟಿಂಗ್ ಆಗುತ್ತಿದೆ ಮತ್ತು ಲೀಕ್ ಆಗುತ್ತಿರುವ ಸುದ್ದಿಗಳು ಅದಕ್ಕೆ ರೇಖಿ ಹಿಡಿಯುತ್ತಿವೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ರೀ ತುಘಲಕ್.. ನೀವು ಆರಂಭ ಮಾಡಿದ್ದೀರಿ, ನಾನು ಮುಗಿಸುತ್ತೇನೆ ಎಂದು ಹೇಳಿದ್ದಾರೆ.

















