ದೆಹಲಿ:ಪ್ರಜಾಪ್ರಭುತ್ವದ ರಕ್ಷಣೆ, ವೋಟ್ ಚೋರಿ ತಡೆ ಹಾಗೂ ಸಂವಿಧಾನದ ಉಳಿವಿಗಾಗಿ ನವೆಂಬರ್ 1 ರಂದು ‘ಚಲೋ ದೆಹಲಿ ರಾಮಲೀಲಾ ಮಾರ್ಚ್’ಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭರ್ಜರಿ ಕರೆ ನೀಡಿದ್ದಾರೆ.
ಇದು ಕೇವಲ ಒಂದು ರಾಜಕೀಯ ಪಕ್ಷದ ಪ್ರತಿಭಟನೆಯಲ್ಲ, ಇದು ಇಡೀ ದೇಶದ ಹೋರಾಟ ಮತ್ತು ಹಿಂದೂಸ್ತಾನ್ ಆತ್ಮದ ಮಾರ್ಚ್ ಆಗಿದೆ ಎಂದು ಸಾರಿದ್ದಾರೆ. ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಜ್ಞಾನೇಶ್ ಕುಮಾರ್ ಅವರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿರುವ ರಾಹುಲ್ ಗಾಂಧಿ, ಪ್ರಜಾಪ್ರಭುತ್ವ ಉಳಿಸಲು ಬಯಸುವ ಪ್ರತಿಯೊಬ್ಬ ನಾಗರಿಕರೂ ಈ ದೇಶದ ಪ್ರತಿಭಟನೆಯಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದ್ದಾರೆ.
ಪೊಲೀಸ್ ಮತ್ತು ಲಾಠಿಗಳಿಗೆ ಧೃತಿಗೆಡಬೇಡಿ, ಬಿಜೆಪಿಗೆ ಇಂತಹ ಯಾವುದೇ ಕುತಂತ್ರ ನಡೆಸುವ ಧೈರ್ಯವಿಲ್ಲ ಎಂದು ಸವಾಲ್ ಹಾಕಿರುವ ಅವರು, ಯಾವುದೇ ರಾಜಕೀಯ ಸಿದ್ಧಾಂತ ಹೊಂದಿದ್ದರೂ ದೇಶ, ಕಲ್ಪನೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿಯಾಗುತ್ತಿದೆ ಎಂದು ಭಾವಿಸುವ ಇಡೀ ವಿದ್ಯಾರ್ಥಿ ಸಮೂಹಕ್ಕೆ ಈ ಐತಿಹಾಸಿಕ ಜನಾಂದೋಲನಕ್ಕೆ ಕೈಜೋಡಿಸಲು ಮುಕ್ತ ಆಹ್ವಾನ ಎಂದಿದ್ದಾರೆ.



















