‘ರಾಮಾಯಣ’ ಸಿನಿಮಾದ ಲಾಸ್ ಎಂಜೆಲ್ಸ್ನ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಕನ್ನಡದ ಬಗ್ಗೆ ಆಡಿದ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿವೆ. ತಾವು ಎಷ್ಟೇ ದೊಡ್ಡ ವೇದಿಕೆಯಲ್ಲಿ ನಿಂತರೂ ಮಾತೃಭಾಷೆ ಕನ್ನಡವನ್ನು ಮರೆಯದ ಯಶ್, ರಾಮಾಯಣ ಕೇವಲ ಸಿನಿಮಾವಲ್ಲ, ಇದು ಭಾರತದ ಸಂಸ್ಕೃತಿ ಮತ್ತು ಪುರಾಣವನ್ನು ಜಗತ್ತಿಗೆ ಪರಿಚಯಿಸುವ ಪ್ರಯತ್ನವಾಗಿದ್ದು, ಸಣ್ಣಪುಟ್ಟ ತಪ್ಪುಗಳನ್ನು ಹುಡುಕಿ ಟೀಕೆ ಮಾಡುವ ಬದಲು ಚಿತ್ರತಂಡದ ಶ್ರಮವನ್ನು ಗೌರವಿಸಬೇಕು ಎಂದು ಕನ್ನಡಿಗರು ಹಾಗೂ ದಕ್ಷಿಣ ಭಾರತೀಯರಿಗೆ ವಿಶೇಷ ಮನವಿ ಮಾಡಿದ್ದಾರೆ.
ಕನ್ನಡಿಗರು ಕೊಟ್ಟ ಪ್ರೀತಿಯಿಂದಲೇ ಈ ಹಂತಕ್ಕೆ ಬಂದಿರುವುದಾಗಿ ಹೇಳಿರುವ ಅವರು, ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನದ ಬೆನ್ನಿಗೆ ಕನ್ನಡಿಗರೇ ನಿಲ್ಲಬೇಕು ಎಂಬ ಸಂದೇಶ ನೀಡಿದ್ದು, ಭಾಷೆ ಮತ್ತು ಸಂಸ್ಕೃತಿ ಬಗ್ಗೆ ವ್ಯಕ್ತಪಡಿಸಿದ ಅಭಿಮಾನ ಚರ್ಚೆಯ ಕೇಂದ್ರವಾಗಿದೆ.


















