ಕಲಬುರಗಿ :ಜೇವರ್ಗಿಯಿಂದ ಮಹಾರಾಷ್ಟ್ರದ ದುಧನಿಗೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸಲಾಗುತ್ತಿತ್ತು. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಮುದಬಾಳ ತಾಂಡದ ಬಳಿ ಟಾಟಾ ಐಚರ್ ಗೂಡ್ಸ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಾಹನದಲ್ಲಿದ್ದ 281 ಬ್ಯಾಗ್ನ 14 ಸಾವಿರ ಕೆಜಿ ಅಕ್ಕಿ ವಶಕ್ಕೆ ಪಡೆಯಲಾಗಿದೆ. ವಾಹನದಲ್ಲಿದ್ದ ರಿಯಾಜ್ ಮುಜಾವರ್ ವಶಕ್ಕೆ ಪಡೆಯಲಾಗಿದ್ದು, ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

















