1998ರಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ರಾಜಸ್ಥಾನದಲ್ಲಿ ಸಿನಿಮಾ ಶೂಟಿಂಗ್ನಲ್ಲಿದ್ದರು. ಆ ಸಂದರ್ಭದಲ್ಲಿ ಸಲ್ಮಾನ್ ಖಾನ್ ಅವರು ಅಲ್ಲಿನ ಕಾಡಿನಲ್ಲಿ ಕೃಷ್ಣಮೃಗವನ್ನು ಬೇಟೆಯಾಡಿದ್ದರು. ಆದರೆ ಬಿಷ್ಣೋಯ್ ಸಮುದಾಯವು ಕೃಷ್ಣಮೃಗವನ್ನು ಅತ್ಯಂತ ಪವಿತ್ರವೆಂದು ಭಾವಿಸಿ ಪೂಜಿಸುತ್ತದೆ.
ಇದೇ ಮುಖ್ಯ ಕಾರಣಕ್ಕೆ ನಟ ಸಲ್ಮಾನ್ ಖಾನ್ನನ್ನು ಕೊಲ್ಲಲು ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಶಪಥ ಮಾಡಿದ್ದಾನೆ. ಸಲ್ಮಾನ್ ಖಾನ್ನನ್ನು ಯಾವುದೇ ಪರಿಸ್ಥಿತಿಯಲ್ಲೂ ಕೊಲ್ಲುವುದಾಗಿ ಈತ ನೇರವಾಗಿ ಶಪಥ ಮಾಡಿದ್ದಾನೆ.



















