ಮೈಸೂರು:ನಾಡಹಬ್ಬ ದಸರಾದಲ್ಲಿ ಮತ್ತೊಂದು ಅವಘಡ ಸಂಭವಿಸಿದ್ದು, ಸೈಯಾಜಿ ರಾವ್ ರಸ್ತೆಯಲ್ಲಿ ಬೃಹತ್ ವಿದ್ಯುತ್ ದೀಪಾಲಂಕಾರದ ಕಂಬ ಕುಸಿದು ಬಿದ್ದಿದೆ. ಕಂಬ ಬಿದ್ದ ರಭಸಕ್ಕೆ ಕಾರು ಹಾಗೂ ಆಟೋ ಸಂಪೂರ್ಣವಾಗಿ ಜಖಂಗೊಂಡಿವೆ.
ಆಟೋ ಮತ್ತು ಕಾರಿನಲ್ಲಿದ್ದವರು ಅದೃಷ್ಟವಶಾತ್ ಪ್ರಾಣಪಾಯದಿಂದ ಬಚಾವಾಗಿದ್ದಾರೆ. ಸ್ಥಳೀಯರು ತಕ್ಷಣವೇಕಾರುಹಾಗೂಆಟೋದಲ್ಲಿದ್ದವರನ್ನು ರಕ್ಷಿಸಿ ಹೊರಗೆ ಕರೆದುಕೊಂಡು ಬಂದಿದ್ದಾರೆ. ನಿನ್ನೆಯಷ್ಟೆ ಯುವ ದಸರಾದಲ್ಲಿ ಬೃಹತ್ ವಿದ್ಯುತ್ ಕಂಬವೊಂದು ಕುಸಿದು ಬಿದ್ದಿತ್ತು.



















