ವಿಜಯನಗರ: ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಅಲಬೂರು ಗ್ರಾಮದ ಸೊಸೈಟಿಯಲ್ಲಿ ಪ್ರಭಾರಿ ಸೆಕ್ರೆಟರಿ ಹುದ್ದೆಗಾಗಿ ಎರಡು ಗುಂಪುಗಳ ಮಧ್ಯೆ ಗುದ್ದಾಟ ನಡೆದಿದೆ. ಇತ್ತೀಚೆಗೆ ಅಲಬೂರು ಕೃಷಿ ಪತ್ತಿನ ಸಹಕಾರಿ ಸಂಘದ ಸೆಕ್ರೆಟರಿಯೊಬ್ಬರು ನಿವೃತ್ತಿಯಾಗಿದ್ದರು. ಅದೇ ಸೊಸೈಟಿಯಲ್ಲಿ ಕಳೆದ 13 ವರ್ಷದಿಂದ ಕ್ಲರ್ಕ್ ಆಗಿ ಮಹಿಳೆಯೊಬ್ಬರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಸೆಕ್ರೆಟರಿ ಹುದ್ದೆ ಖಾಲಿ ಆದ ತಕ್ಷಣ ಈ ಮಹಿಳೆಗೆ ಇನ್ ಚಾರ್ಜ್ ಕೊಡಬೇಕಿತ್ತು. ಆದ್ರೆ ಈ ಹಿಂದೆ ರಾಜಕೀಯ ಪ್ರಭಾವದಿಂದ ಅವಕಾಶ ಕೈತಪ್ಪಿದ್ದು, ಕ್ಷೇತ್ರಾಧಿಕಾರಿ ಪ್ರವೀಣ್ಗೆ ಸೆಕ್ರೆಟರಿ ಇನ್ ಚಾರ್ಜ್ ಕೊಡಲಾಗಿತ್ತು. ಕೆಲ ತಿಂಗಳ ನಂತ್ರ ಪ್ರವೀಣ್ ತಾವೇ ಸೆಕ್ರೆಟರಿ ಹುದ್ದೆಯಿಂದ ಹೊರ ಬಂದಿದ್ದಾರೆ.
ಈಗಲಾದ್ರೂ ಕ್ಲರ್ಕ್ ಆಗಿದ್ದ ಮಹಿಳೆಗೆ ಸೆಕ್ರೆಟರಿ ಇನ್ ಚಾರ್ಜ್ ಕೊಡಬಹುದಿತ್ತು. ಆದ್ರೀಗ ಮತ್ತೆ ಬೇರೆ ಸೊಸೈಟಿ ಸೆಕ್ರೆಟರಿಯಾದ ಅಯ್ಯನಹಳ್ಳಿ ಸೊಸೈಟಿ ಸೆಕ್ರೆಟರಿ ಕೊಟ್ರೇಶ್ಗೆ ಅಲಬೂರು ಸೊಸೈಟಿ ಇನ್ ಚಾರ್ಜ್ ಕೊಡಲಾಗಿದೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಯಶ್ ‘ರಾಮಾಯಣ’ ಮಹಾಕಾವ್ಯದ ಅಪ್ಡೇಟ್!

















