ಬೆಂಗಳೂರು: ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಬಯಸುವ ಭಕ್ತರಿಗೆ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಶನ್ (IRCTC) ಸಿಹಿ ಸುದ್ದಿ ನೀಡಿದೆ. ‘ಭಾರತ್ ಗೌರವ್ ಪ್ರವಾಸಿ ರೈಲು’ (Bharat Gaurav Tourist Train) ಯೋಜನೆಯಡಿ 9 ದಿನ ಮತ್ತು 8 ರಾತ್ರಿಗಳ ವಿಶೇಷ ಪುಣ್ಯಕ್ಷೇತ್ರ ಪ್ರವಾಸ ಪ್ಯಾಕೇಜ್ ಅನ್ನು ಐಆರ್ ಸಿಟಿಸಿ ಘೋಷಿಸಿದೆ.
ಧಾರ್ಮಿಕ ಪ್ರವಾಸದಲ್ಲಿ ಪ್ರಯಾಣಿಕರು ರಾಮೇಶ್ವರಂ, ಕನ್ಯಾಕುಮಾರಿ, ಮದುರೈ, ತಂಜಾವೂರು, ತಿರುಚಿನಾಪಳ್ಳಿ (ತಿಚಿ) ಮತ್ತು ಮಹಾಬಲಿಪುರಂ ಸೇರಿದಂತೆ ದಕ್ಷಿಣ ಭಾರತದ 7 ಪವಿತ್ರ ಮತ್ತು ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸಬಹುದು. ಕಡಿಮೆ ಬೆಲೆ ಹಾಗೂ ಸುಸಜ್ಜಿತ ಸೌಕರ್ಯಗಳೊಂದಿಗೆ ದಕ್ಷಿಣ ಭಾರತದ ದೇವಾಲಯಗಳಿಗೆ ತೀರ್ಥಯಾತ್ರೆ ಕೈಗೊಳ್ಳುವವರಿಗೆ ಇದು ಒಳ್ಳೆಯ ಆಫರ್ ಎನಿಸಿದೆ.
ದರ ಮತ್ತು ಸೌಲಭ್ಯಗಳು
ಆರಂಭಿಕ ದರ: ಈ ಪ್ರವಾಸದ ಕನಿಷ್ಠ ದರ ಪ್ರತಿ ವ್ಯಕ್ತಿಗೆ 15,600 ರೂಪಾಯಿಯಿಂದ (ಸ್ಲೀಪರ್ ರೈಲು) ಪ್ರಾರಂಭವಾಗುತ್ತದೆ.
ವಿವಿಧ ವರ್ಗಗಳು: ಎಕಾನಮಿ, ಸ್ಟ್ಯಾಂಡರ್ಡ್ ಮತ್ತು ಕಂಫರ್ಟ್ ಸೇರಿದಂತೆ ಪ್ರಯಾಣಿಕರ ಬಜೆಟ್ ಗೆ ತಕ್ಕಂತೆ ಮೂರು ವಿಭಾಗಗಳಲ್ಲಿ ಟಿಕೆಟ್ ಲಭ್ಯ ಇವೆ.
ಒಳಗೊಂಡಿರುವ ಸೇವೆಗಳು: ರೈಲು ಪ್ರಯಾಣ, ತಂಗಲು ವಸತಿ ವ್ಯವಸ್ಥೆ, ಸಸ್ಯಾಹಾರಿ ಆಹಾರ (ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ), ಸ್ಥಳೀಯ ವೀಕ್ಷಣೆಗೆ ಬಸ್ ಸಾರಿಗೆ ಹಾಗೂ ಪ್ರವಾಸಿ ಮಾರ್ಗದರ್ಶಿ ಮತ್ತು ಭದ್ರತಾ ಸಿಬ್ಬಂದಿಯ ಸೌಲಭ್ಯಗಳು ಈ ಶುಲ್ಕದಲ್ಲೇ ಸೇರಿವೆ.
ಬುಕಿಂಗ್ ಹೇಗೆ?
ಧಾರ್ಮಿಕ ಪ್ರವಾಸ ಮಾಡುವ ಆಸಕ್ತರು ಐಆರ್ ಸಿಟಿಸಿಯ ಅಧಿಕೃತ ವೆಬ್ ಸೈಟ್ www.irctctourism.com ಮೂಲಕ ಅಥವಾ ಐಆರ್ ಸಿಟಿಸಿ ಪ್ರವಾಸಿ ಸೌಲಭ್ಯ ಕೇಂದ್ರಗಳಿಗೆ ಭೇಟಿ ನೀಡಿ ಆನ್ ಲೈನ್ ನಲ್ಲಿ ಟಿಕೆಟ್ ಕಾಯ್ದಿರಿಸಬಹುದು. ಸೀಟುಗಳು ಸೀಮಿತವಾಗಿದ್ದು, ಪ್ರಯಾಣಿಕರು ಆದಷ್ಟು ಬೇಗ ಬುಕ್ ಮಾಡಲು ಸೂಚಿಸಲಾಗಿದೆ.
ಇದನ್ನೂ ಓದಿ :ಬೆಂಗಳೂರಿನಲ್ಲಿರುವ CSB ISBR ಸಂಸ್ಥೆಯಲ್ಲಿ ನೇಮಕಾತಿ: ಕೂಡಲೇ ಅರ್ಜಿ ಸಲ್ಲಿಸಿ!



















