ಬೆಂಗಳೂರು : ನಾಡಿನಾದ್ಯಂತ ಗಣೇಶ ಚತುರ್ಥಿ ಸಂಭ್ರಮ ಮನೆ ಮಾಡಿದೆ.ಈ ಬಾರಿ ಗೌರಿ-ಗಣೇಶ ಹಬ್ಬವು ಒಂದೇ ದಿನ ಬಂದಿರುವುದರಿಂದ ಎಲ್ಲೆಡೆ ಸಂಭ್ರಮ ದುಪ್ಪಟ್ಟಾಗಿದ್ದು, ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲಿ ನಸುಕಿನ ಜಾವದಿಂದಲೇ ಹೂವು, ಹಣ್ಣು ಖರೀದಿಗೆ ಜನ ಸಾಗರೋಪಾದಿಯಲ್ಲಿ ಆಗಮಿಸಿದ್ದಾರೆ.
ಹೂವು, ಹಣ್ಣು, ಗಣೇಶ ಮೂರ್ತಿ ಸೇರಿದಂತೆ ಹಬ್ಬದ ಅಗತ್ಯ ವಸ್ತುಗಳ ಖರೀದಿಯಲ್ಲಿ ಜನರು ಮಗ್ನರಾಗಿದ್ದಾರೆ. ಬೆಲೆ ದುಬಾರಿಯಾಗಿದ್ದರೂ, ಗ್ರಾಹಕರು ಅದನ್ನು ಲೆಕ್ಕಿಸದೆ ತಮ್ಮ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಸೇವಂತಿಗೆ, ತಾವರೆ, ಗುಲಾಬಿ, ಕನಕಾಂಬರ, ಮಲ್ಲಿಗೆಯಂತಹ ಹೂವುಗಳು ಹಾಗೂ ಆಪಲ್, ದಾಳಿಂಬೆ, ಬಾಳೆಹಣ್ಣುಗಳ ಬೆಲೆ ಏರಿಕೆಯಾಗಿದ್ದರೂ, ಹಬ್ಬದ ಸಂಭ್ರಮಕ್ಕೆ ಯಾವುದೇ ಅಡ್ಡಿಯಾಗಿಲ್ಲ.
ಯಾವುದರ ದರ ಎಷ್ಟು?
ಸೇವಂತಿಗೆ 1 kg : 350 ರೂ.
ತಾವರೆ ಹೂವು (ಜೋಡಿ) : 50
ಗುಲಾಬಿ (ಬಟನ್) : 1 kg : 350
ಮಿಕ್ಸ್ ಹೂವು : 1 kg : 300 – 400
ಕನಕಾಂಬರ (ಮೊಳ) : 50 : 2000 (1kg)
ಮಲ್ಲಿಗೆ (ಮೊಳ) : 50 : 1000 (1kg)
ತುಳಸಿ ತೋರಣ (ಮೊಳ) : 60
ಮಾವಿನ ಎಲೆ (ಕಟ್ಟು) : 10 – 30
ಬಾಳೆ ದಿಂಡು (ಜೋಡಿ) : 50 – 80
ಹಣ್ಣುಗಳ ದರ
ಸೇಬು: 200 ರಿಂದ 300 (1kg)
ದಾಳಿಂಬೆ: 100 ರಿಂದ 250
ಸಪೋಟ: 150 ರಿಂದ 200
ದ್ರಾಕ್ಷಿ: 120 ರಿಂದ 150
ಮೂಸಂಬಿ ಹಾಗೂ ಕಿತ್ತಳೆ: 80 ರಿಂದ 100
ಬಾಳೆ ಹಣ್ಣು- 80 ರಿಂದ 150
ತರಕಾರಿ ದರ
ಈರುಳ್ಳಿ: 60 ರಿಂದ 70 (1KG)
ಹನಿಮೆಣಸಿನಕಾಯಿ: 40 ರಿಂದ 60
ಬೀಟ್‌ರೂಟ್: 50 ರಿಂದ 60
ಬೆಳ್ಳುಳ್ಳಿ: 200 ರಿಂದ 250
ನಿಂಬೆಹಣ್ಣು: (ಒಂದಕ್ಕೆ) 8 ರಿಂದ 15
ನುಗ್ಗೆಕಾಯಿ: (ಒಂದಕ್ಕೆ) 10 ರಿಂದ 15
ಕ್ಯಾಪ್ಸಿಕಂ: 50-70
ಬಟಾಣಿ: 140 ರಿಂದ 160
ದಿನಸಿ ದರ
ಬೆಲ್ಲ: 50 ರಿಂದ 55
ತೊಗರಿಬೇಳೆ : 160 ರಿಂದ 170
ಹುರಿಗಡಲೆ : 150 ರಿಂದ 180
ಕಡಲೆಬೀಜ : 100 ರಿಂದ 140
ಸಕ್ಕರೆ : 60 ರಿಂದ 80
ಚಿರೋಟಿ ರವೆ : 90 ರಿಂದ 100
ಮೈದಾ ಹಿಟ್ಟು : 45 ರಿಂದ 50
ಕಡಲೆಕಾಳು : 90 ರಿಂದ 100
ಅಡುಗೆ ಎಣ್ಣೆ : ಲೀಟರ್‌ಗೆ 190 ರಿಂದ 210 (ಆಯಾ ಬ್ರ್ಯಾಂಡ್‌ಗಳ ಮೇಲೆ)
ಇದನ್ನೂ ಓದಿ : ವಾಹನ ಮಾಲೀಕರಿಗೆ ಗುಡ್ ನ್ಯೂಸ್ ; ಫಾಸ್ಟ್ಯಾಗ್ ಬ್ಯಾಂಕ್ ಬದಲಾವಣೆ ಈಗ ಸುಲಭ.. ಏನಿದು ಒನ್ ಟ್ಯಾಗ್?



















