ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿದೇಶ

ಅಮೆರಿಕದಲ್ಲಿ ಇಬ್ಬರು ಮಲಯಾಳಿ ಮಹಿಳೆಯರ ಕೊಲೆ ಕೇಸ್‌ : ಹಂತಕಿ ಗೆಳತಿ ವಿರುದ್ಧ ದೋಷಾರೋಪ!

September 12, 2026
Share on WhatsappShare on FacebookShare on Twitter

ವಾಷಿಂಗ್ಟನ್ : ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಇತ್ತೀಚೆಗೆ ನಡೆದಿದ್ದ ಕೇರಳ ಮೂಲದ ಇಬ್ಬರು ಮಹಿಳೆಯರ ಹತ್ಯೆ ಪ್ರಕರಣಕ್ಕೆ ಸಂಬಂಧಿ ಆ ಮಹಿಳೆಯರ ಸ್ನೇಹಿತೆಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಇದೀಗ ಆಕೆಯ ವಿರುದ್ಧ ಕೊಲೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಓಣಂ ಹಬ್ಬವನ್ನು ಒಟ್ಟಾಗಿ ಆಚರಿಸಿದ ಮರುದಿನವೇ ಇಬ್ಬರು ಮಲಯಾಳಿ ಮಹಿಳೆಯರು ಅನುಮಾನಾಸ್ಪದ ರೀತಿಯಲ್ಲಿ ಕೊಲೆಯಾಗಿದ್ದರು. ಈ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ನಿಕಟವರ್ತಿಯಾಗಿದ್ದ 32 ವರ್ಷದ ಅನಿಲಾ ಬೇಬಿಯನ್ನು ಪೊಲೀಸರು ಬಂಧಿಸಿದ್ದಾರೆ.

ಖುಷಿಯಿಂದ ಬಂದವಳ ಮೇಲೆ ಹರಿದ ಎಸ್‌ಯುವಿ ಕಾರು

ಮಿಲ್ಪಿಟಾಸ್‌ನ ಮಿಲ್ ಕ್ರೀಕ್ ಅಪಾರ್ಟ್‌ಮೆಂಟ್ ಆವರಣದ ಪಾರ್ಕಿಂಗ್ ಲಾಟ್‌ನಲ್ಲಿ ಹರಿ ಎಂಬ ಮಹಿಳೆ ನಡೆದುಕೊಂಡು ಹೋಗುತ್ತಿದ್ದಾಗ, ನೀಲಿ ಬಣ್ಣದ ಟೊಯೋಟಾ ಹೈಲ್ಯಾಂಡರ್ ಎಸ್‌ಯುವಿ ಕಾರು ಅವರ ಮೇಲೆಯೇ ಹರಿದು ಭೀಕರ ಅಪಘಾತ ಸಂಭವಿಸಿತ್ತು. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಹರಿ ಅವರ ತಲೆಗೆ ತೀವ್ರ ಪೆಟ್ಟಾಗಿ, ಸ್ಥಳದಲ್ಲೇ ಅವರು ಕೊನೆಯುಸಿರೆಳೆದಿದ್ದರು.

ಘಟನೆಯನ್ನು ನೋಡಿದ ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸರಿಗೆ ನೀಡಿರುವ ಹೇಳಿಕೆಯ ಪ್ರಕಾರ, ಹರಿ ಅವರು ಅತ್ಯಂತ ಖುಷಿಯಿಂದ ಕಾರಿನಲ್ಲಿದ್ದ ಚಾಲಕಿಯ ಬಳಿಗೆ ತೆರಳಿದ್ದರು. ಕಾರಿನಲ್ಲಿದ್ದ ಬೇಬಿ ಹಾಗೂ ಹರಿ ನಡುವೆ ಯಾವುದೇ ರೀತಿಯ ಜಗಳ ಅಥವಾ ವಾಗ್ವಾದ ನಡೆದಂತೆ ಕಾಣಿಸಿರಲಿಲ್ಲ. ಆದರೆ, ಹರಿ ಕಾರಿನ ಮುಂಭಾಗಕ್ಕೆ ಬರುತ್ತಿದ್ದಂತೆ ಎಸ್‌ಯುವಿ ಹಠಾತ್ತಾಗಿ ವೇಗವನ್ನು ಹೆಚ್ಚಿಸಿ ಅವರ ಮೇಲೆಯೇ ಹರಿದಿದೆ. ವಾಹನವನ್ನು ತಡೆಯಲು ಬ್ರೇಕ್ ಹಾಕಿದ ಯಾವುದೇ ಗುರುತುಗಳು ಸ್ಥಳದಲ್ಲಿ ಪತ್ತೆಯಾಗಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಅಪಘಾತವೆಸಗಿದ ಕಾರು ಅಕ್ಕಪಕ್ಕದಲ್ಲಿದ್ದ ಮೂರು ವಾಹನಗಳಿಗೆ ಡಿಕ್ಕಿ ಹೊಡೆದು ಸ್ಥಳದಿಂದ ಕಾಲ್ಕಿತ್ತಿತ್ತು.

ಮತ್ತೊಂದು ಮನೆಯಲ್ಲಿ ಇರಿದು ಕೊಲೆಯಾಗಿದ್ದ ಗೆಳತಿ

ಈ ಭೀಕರ ಅಪಘಾತ ನಡೆದು ಕೇವಲ ಎರಡು ಗಂಟೆಗಳ ಅಂತರದಲ್ಲಿ, ಅಂದರೆ ಮಧ್ಯಾಹ್ನ 1.53 ರ ಸುಮಾರಿಗೆ ಸ್ಯಾನ್ ಜೋಸ್ ನಗರದ ಲಿಂಡಾ ವಿಸ್ಟಾ ಸ್ಟ್ರೀಟ್‌ನಲ್ಲಿರುವ ಮನೆಯೊಂದರಲ್ಲಿ ಮ್ಯಾಥ್ಯೂ ಎಂಬ ಮತ್ತೊಬ್ಬ ಮಹಿಳೆ ನಿಗೂಢ ರೀತಿಯಲ್ಲಿ ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಪೊಲೀಸರ ಗಮನಕ್ಕೆ ಬಂದಿತ್ತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಮ್ಯಾಥ್ಯೂ ಆಗಲೇ ಮೃತಪಟ್ಟಿರುವುದು ಖಚಿತವಾಗಿತ್ತು. ಪ್ರಕರಣ ಕೈಗೆತ್ತಿಕೊಂಡ ಸ್ಯಾನ್ ಜೋಸ್ ಪೊಲೀಸ್ ಕೊಲೆ ತನಿಖಾ ವಿಭಾಗವು, ಮ್ಯಾಥ್ಯೂ ಅವರ ದೇಹದ ಮೇಲೆ ಚಾಕು ಇರಿತದ ಗಾಯಗಳಿರುವುದನ್ನು ಪತ್ತೆಹಚ್ಚಿತ್ತು. ಮ್ಯಾಥ್ಯೂ ಕೂಡ ಕೊಲೆಯಾದ ಹರಿ ಹಾಗೂ ಹಂತಕಿ ಬೇಬಿ ಅವರ ಸ್ನೇಹಿತೆಯಾಗಿದ್ದರು.

ಓಣಂ ಆಚರಿಸಿದ್ದ ಗೆಳತಿಯರ ಕರಾಳ ಅಂತ್ಯ

ಮೃತಪಟ್ಟ ಮ್ಯಾಥ್ಯೂ ತಿರುವನಂತಪುರಂ ಮೂಲದವರಾಗಿದ್ದರೆ, ಹರಿ ಅವರು ತ್ರಿಶೂರ್ ಮೂಲದವರಾಗಿದ್ದರು. ಕೊಲೆ ಆರೋಪಿ ಬೇಬಿ ಮತ್ತು ಹರಿ ಇಬ್ಬರೂ ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು ಹಾಗೂ ಇವರಿಬ್ಬರೂ ಅತ್ಯಂತ ಆಪ್ತ ಗೆಳತಿಯರಾಗಿದ್ದರು. ಕೊಲೆಯಾದ ಮ್ಯಾಥ್ಯೂ ಕೂಡ ಇವರಿಗೆ ನಿಕಟ ಪರಿಚಿತರಾಗಿದ್ದರು. ವಿಶೇಷವೆಂದರೆ, ಘಟನೆ ನಡೆಯುವ ಹಿಂದಿನ ದಿನವಷ್ಟೇ (ಆಗಸ್ಟ್ 27) ಈ ಮೂವರೂ ಮಹಿಳೆಯರು ಒಟ್ಟಾಗಿ ಓಣಂ ಹಬ್ಬವನ್ನು ಆಚರಿಸಿ, ಸಿನಿಮಾ ನೋಡಿ ಸಂಭ್ರಮಿಸಿ ವಾಪಸಾಗಿದ್ದರು ಎಂದು ಸಂಬಂಧಿಕರು ಮಾಹಿತಿ ನೀಡಿದ್ದಾರೆ.

ಆರೋಪಿಯ ಬಂಧನ

ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಮಿಲ್ಪಿಟಾಸ್ ಪೊಲೀಸರು ಅಪಾರ್ಟ್‌ಮೆಂಟ್‌ನಿಂದ ಅರ್ಧ ಮೈಲಿ ದೂರದಲ್ಲಿದ್ದ ವಾಲ್‌ಗ್ರೀನ್ಸ್ ಸ್ಟೋರ್ ಬಳಿ ಹಾನಿಗೊಳಗಾಗಿದ್ದ ಎಸ್‌ಯುವಿ ಕಾರಿನೊಳಗೆ ರಕ್ತಸಿಕ್ತ ಸ್ಥಿತಿಯಲ್ಲಿದ್ದ ಆರೋಪಿ ಬೇಬಿಯನ್ನು ಪತ್ತೆಹಚ್ಚಿದ್ದಾರೆ. ಕೈ-ಕಾಲುಗಳ ಮೇಲೆ ಗಾಯಗಳೊಂದಿಗೆ ಪ್ರಜ್ಞಾಹೀನ ಹಾಗೂ ಮಾತನಾಡಲಾಗದ ಸ್ಥಿತಿಯಲ್ಲಿದ್ದ ಆಕೆಯನ್ನು ವಶಕ್ಕೆ ಪಡೆದ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರಂಭದಲ್ಲಿ ಸ್ಯಾನ್ ಜೋಸ್ ಪೊಲೀಸರು ಮ್ಯಾಥ್ಯೂ ಕೊಲೆ ಪ್ರಕರಣವನ್ನು ಪ್ರತ್ಯೇಕವಾಗಿ ತನಿಖೆ ನಡೆಸಿದ್ದರೂ, ಲಭ್ಯವಿರುವ ಸಾಕ್ಷ್ಯಾಧಾರಗಳನ್ನು ಆಧರಿಸಿ ಪ್ರಾಸಿಕ್ಯೂಟರ್‌ಗಳು ಈಗ ಬೇಬಿ ವಿರುದ್ಧ ಹರಿ ಮತ್ತು ಮ್ಯಾಥ್ಯೂ ಇಬ್ಬರನ್ನೂ ಕೊಲೆ ಮಾಡಿದ ಗಂಭೀರ ಆರೋಪ ಹೊರಿಸಿದ್ದಾರೆ.

ಇದನ್ನೂ ಓದಿ : ಆಟಗಾರರ ಗಾಯದ ಸಮಸ್ಯೆಗೆ ಬ್ರೇಕ್ ಹಾಕಲು ಬಿಸಿಸಿಐ ಮಾಸ್ಟರ್ ಪ್ಲ್ಯಾನ್!

Tags: America Murder CaseCriminal CaseDouble murder caseInternational Crime NewsKerala newsKerala Women MurderKNBMalayali Women Murder CaseMurder InvestigationNews beatUS Crime NewsWoman Accused
SendShareTweet
Previous Post

ಆಟಗಾರರ ಗಾಯದ ಸಮಸ್ಯೆಗೆ ಬ್ರೇಕ್ ಹಾಕಲು ಬಿಸಿಸಿಐ ಮಾಸ್ಟರ್ ಪ್ಲ್ಯಾನ್!

Next Post

ಐಫೋನ್‌ ಕೊಂಡುಕೊಳ್ಳೋಕೆ 3 ಲಕ್ಷ ರೂ… ಫೋನ್‌ನಾ ಇದು, ಚಿನ್ನನಾ? ಆ್ಯಪಲ್‌ಗೆ ನೆಟ್ಟಿಗರ ಪಂಚ್‌

Related Posts

ಹೊರ್ಮುಜ್ ಬಳಿಕ ಜಗತ್ತಿಗೆ ಬಾಬ್ ಅಲ್-ಮಂದೇಬ್ ಕಂಟಕ : ‘ಕಣ್ಣೀರಿನ ಬಾಗಿಲು’ ಈಗ ಹೌತಿ ಉಗ್ರರ ವಶಕ್ಕೆ?
ವಿದೇಶ

ಹೊರ್ಮುಜ್ ಬಳಿಕ ಜಗತ್ತಿಗೆ ಬಾಬ್ ಅಲ್-ಮಂದೇಬ್ ಕಂಟಕ : ‘ಕಣ್ಣೀರಿನ ಬಾಗಿಲು’ ಈಗ ಹೌತಿ ಉಗ್ರರ ವಶಕ್ಕೆ?

ಅಮೆರಿಕ ವಿಶ್ವವಿದ್ಯಾಲಯಕ್ಕೆ ಭಾರತೀಯ ಮೂಲದ ದಂಪತಿಯಿಂದ 20 ಮಿಲಿಯನ್ ಡಾಲರ್ ದೇಣಿಗೆ!
ವಿದೇಶ

ಅಮೆರಿಕ ವಿಶ್ವವಿದ್ಯಾಲಯಕ್ಕೆ ಭಾರತೀಯ ಮೂಲದ ದಂಪತಿಯಿಂದ 20 ಮಿಲಿಯನ್ ಡಾಲರ್ ದೇಣಿಗೆ!

ಸೇನಾ ಅಭ್ಯಾಸದ ವೇಳೆ ಟ್ಯಾಂಕ್ ಸ್ಫೋಟ ; ಇಬ್ಬರು ಸೈನಿಕರು ಸಾವು, ಅಧಿಕಾರಿ ಗಂಭೀರ
ವಿದೇಶ

ಸೇನಾ ಅಭ್ಯಾಸದ ವೇಳೆ ಟ್ಯಾಂಕ್ ಸ್ಫೋಟ ; ಇಬ್ಬರು ಸೈನಿಕರು ಸಾವು, ಅಧಿಕಾರಿ ಗಂಭೀರ

ಹಿಂದೂ ನಿಯೋಗ ಭೇಟಿ ವೇಳೆ ಮಹಿಳಾ ಸಿಬ್ಬಂದಿಗೆ ತಾರತಮ್ಯ ಆರೋಪ : ಪ್ಯಾರಿಸ್‌ನ ಐಫೆಲ್ ಟವರ್ ಬಂದ್
ವಿದೇಶ

ಹಿಂದೂ ನಿಯೋಗ ಭೇಟಿ ವೇಳೆ ಮಹಿಳಾ ಸಿಬ್ಬಂದಿಗೆ ತಾರತಮ್ಯ ಆರೋಪ : ಪ್ಯಾರಿಸ್‌ನ ಐಫೆಲ್ ಟವರ್ ಬಂದ್

ಅಶ್ಲೀಲ ಚಿತ್ರೋದ್ಯಮಕ್ಕೆ ಕಾನೂನು ಮಾನ್ಯತೆ ನೀಡಿ ಯುದ್ಧನಿಧಿಗೆ ಹಣ ಕ್ರೋಡೀಕರಣ : ಉಕ್ರೇನ್ ಮಾಸ್ಟರ್ ಪ್ಲ್ಯಾನ್!
ವಿದೇಶ

ಅಶ್ಲೀಲ ಚಿತ್ರೋದ್ಯಮಕ್ಕೆ ಕಾನೂನು ಮಾನ್ಯತೆ ನೀಡಿ ಯುದ್ಧನಿಧಿಗೆ ಹಣ ಕ್ರೋಡೀಕರಣ : ಉಕ್ರೇನ್ ಮಾಸ್ಟರ್ ಪ್ಲ್ಯಾನ್!

3.85 ಕೋಟಿ ರೂ.ಗೆ ಅಪರೂಪದ ಬಿಳಿ ಗಿಡುಗ ಖರೀದಿಸಿ ಸೋದರಸೊಸೆಯ ಆಸೆ ಈಡೇರಿಸಿದ ಮಾವ!
ವಿದೇಶ

3.85 ಕೋಟಿ ರೂ.ಗೆ ಅಪರೂಪದ ಬಿಳಿ ಗಿಡುಗ ಖರೀದಿಸಿ ಸೋದರಸೊಸೆಯ ಆಸೆ ಈಡೇರಿಸಿದ ಮಾವ!

Next Post
ಐಫೋನ್‌ ಕೊಂಡುಕೊಳ್ಳೋಕೆ 3 ಲಕ್ಷ ರೂ… ಫೋನ್‌ನಾ ಇದು, ಚಿನ್ನನಾ? ಆ್ಯಪಲ್‌ಗೆ ನೆಟ್ಟಿಗರ ಪಂಚ್‌

ಐಫೋನ್‌ ಕೊಂಡುಕೊಳ್ಳೋಕೆ 3 ಲಕ್ಷ ರೂ... ಫೋನ್‌ನಾ ಇದು, ಚಿನ್ನನಾ? ಆ್ಯಪಲ್‌ಗೆ ನೆಟ್ಟಿಗರ ಪಂಚ್‌

  • Trending
  • Comments
  • Latest
ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ದೆಹಲಿ ಪರ ಮತ್ತೆ ಕಣಕ್ಕಿಳಿಯಲಿದ್ದಾರಾ ಕೊಹ್ಲಿ? ರೋಹನ್ ಜೇಟ್ಲಿ ಮಹತ್ವದ ಅಪ್‌ಡೇಟ್

ದೆಹಲಿ ಪರ ಮತ್ತೆ ಕಣಕ್ಕಿಳಿಯಲಿದ್ದಾರಾ ಕೊಹ್ಲಿ? ರೋಹನ್ ಜೇಟ್ಲಿ ಮಹತ್ವದ ಅಪ್‌ಡೇಟ್

ಹೊರ್ಮುಜ್ ಬಳಿಕ ಜಗತ್ತಿಗೆ ಬಾಬ್ ಅಲ್-ಮಂದೇಬ್ ಕಂಟಕ : ‘ಕಣ್ಣೀರಿನ ಬಾಗಿಲು’ ಈಗ ಹೌತಿ ಉಗ್ರರ ವಶಕ್ಕೆ?

ಹೊರ್ಮುಜ್ ಬಳಿಕ ಜಗತ್ತಿಗೆ ಬಾಬ್ ಅಲ್-ಮಂದೇಬ್ ಕಂಟಕ : ‘ಕಣ್ಣೀರಿನ ಬಾಗಿಲು’ ಈಗ ಹೌತಿ ಉಗ್ರರ ವಶಕ್ಕೆ?

ಬೆಂಗಳೂರು ನಗರ ವಿವಿಯಲ್ಲಿ 2 ಹುದ್ದೆಗಳ ನೇಮಕಾತಿ : 60 ಸಾವಿರ ರೂ. ಸಂಬಳ

ಬೆಂಗಳೂರು ನಗರ ವಿವಿಯಲ್ಲಿ 2 ಹುದ್ದೆಗಳ ನೇಮಕಾತಿ : 60 ಸಾವಿರ ರೂ. ಸಂಬಳ

ಐಫೋನ್‌ ಕೊಂಡುಕೊಳ್ಳೋಕೆ 3 ಲಕ್ಷ ರೂ… ಫೋನ್‌ನಾ ಇದು, ಚಿನ್ನನಾ? ಆ್ಯಪಲ್‌ಗೆ ನೆಟ್ಟಿಗರ ಪಂಚ್‌

ಐಫೋನ್‌ ಕೊಂಡುಕೊಳ್ಳೋಕೆ 3 ಲಕ್ಷ ರೂ… ಫೋನ್‌ನಾ ಇದು, ಚಿನ್ನನಾ? ಆ್ಯಪಲ್‌ಗೆ ನೆಟ್ಟಿಗರ ಪಂಚ್‌

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ದೆಹಲಿ ಪರ ಮತ್ತೆ ಕಣಕ್ಕಿಳಿಯಲಿದ್ದಾರಾ ಕೊಹ್ಲಿ? ರೋಹನ್ ಜೇಟ್ಲಿ ಮಹತ್ವದ ಅಪ್‌ಡೇಟ್

ದೆಹಲಿ ಪರ ಮತ್ತೆ ಕಣಕ್ಕಿಳಿಯಲಿದ್ದಾರಾ ಕೊಹ್ಲಿ? ರೋಹನ್ ಜೇಟ್ಲಿ ಮಹತ್ವದ ಅಪ್‌ಡೇಟ್

ಹೊರ್ಮುಜ್ ಬಳಿಕ ಜಗತ್ತಿಗೆ ಬಾಬ್ ಅಲ್-ಮಂದೇಬ್ ಕಂಟಕ : ‘ಕಣ್ಣೀರಿನ ಬಾಗಿಲು’ ಈಗ ಹೌತಿ ಉಗ್ರರ ವಶಕ್ಕೆ?

ಹೊರ್ಮುಜ್ ಬಳಿಕ ಜಗತ್ತಿಗೆ ಬಾಬ್ ಅಲ್-ಮಂದೇಬ್ ಕಂಟಕ : ‘ಕಣ್ಣೀರಿನ ಬಾಗಿಲು’ ಈಗ ಹೌತಿ ಉಗ್ರರ ವಶಕ್ಕೆ?

  • About
  • Advertise
  • Privacy & Policy
  • Contact Us

© 2025 News beat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 News beat