ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

ಚರ್ಮದ ಕ್ಯಾನ್ಸರ್ ತಡೆಗೆ ಬಂತು mRNA ಸಂಜೀವಿನಿ : ಕ್ಲಿನ್ ಪರೀಕ್ಷೆಯಲ್ಲಿ ಗೆದ್ದ ಮಾಡರ್ನಾ ಕ್ಯಾನ್ಸರ್ ಲಸಿಕೆ

August 20, 2026
Share on WhatsappShare on FacebookShare on Twitter

ವಾಷಿಂಗ್ಟನ್ : ಕ್ಯಾನ್ಸರ್ ಚಿಕಿತ್ಸಾ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಿರುವ ಫಾರ್ಮಾ ದೈತ್ಯ ಸಂಸ್ಥೆಗಳಾದ ಮಾಡರ್ನಾ (Moderna) ಮತ್ತು ಮರ್ಕ್ (Merck) ತಾವು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ‘ಎಂಆರ್‌ಎನ್‌ಎ’ (mRNA) ಕ್ಯಾನ್ಸರ್ ಲಸಿಕೆಯು ಅಂತಿಮ ಹಂತದ ಕ್ಲಿನಿಕಲ್ ಪ್ರಯೋಗಗಳಲ್ಲಿ ಅಭೂತಪೂರ್ವ ಯಶಸ್ಸು ಕಂಡಿರುವುದಾಗಿ ಘೋಷಿಸಿವೆ.

ಅತ್ಯಂತ ಭೀಕರ ಚರ್ಮದ ಕ್ಯಾನ್ಸರ್ ಎನಿಸಿಕೊಂಡಿರುವ ‘ಮೆಲನೋಮ’ವು (Melanoma) ಶಸ್ತ್ರಚಿಕಿತ್ಸೆಯ ನಂತರವೂ ಮರುಕಳಿಸುವುದನ್ನು ಹಾಗೂ ಅದು ದೇಹದ ಇತರ ಭಾಗಗಳಿಗೆ ಹರಡುವುದನ್ನು ಈ ಲಸಿಕೆ ಪರಿಣಾಮಕಾರಿಯಾಗಿ ತಡೆಯುತ್ತದೆ ಎಂಬುದು ಪ್ರಯೋಗದಿಂದ ಸಾಬೀತಾಗಿದೆ ಎಂದು ಈ ಕಂಪನಿಗಳು ಹೇಳಿವೆ.

ಅತ್ಯಧಿಕ ಅಪಾಯಕಾರಿ ಹಂತದಲ್ಲಿರುವ (Stage IIB to IV) 1,137 ಮೆಲನೋಮ ರೋಗಿಗಳ ಮೇಲೆ ಈ ಲಸಿಕೆಯ ಪ್ರಯೋಗವನ್ನು ನಡೆಸಲಾಗಿತ್ತು. ಶಸ್ತ್ರಚಿಕಿತ್ಸೆಯ ಮೂಲಕ ಕ್ಯಾನ್ಸರ್ ಗಡ್ಡೆಯನ್ನು ತೆಗೆದುಹಾಕಿದ ರೋಗಿಗಳಿಗೆ ಮರ್ಕ್ ಸಂಸ್ಥೆಯ ‘ಕೀಟ್ರುಡಾ’ (Keytruda) ಔಷಧಿಯೊಂದಿಗೆ ಈ ಎಂಆರ್‌ಎನ್‌ಎ ಲಸಿಕೆಯನ್ನು ನೀಡಿ ಪರೀಕ್ಷಿಸಲಾಯಿತು. ಕೇವಲ ಕೀಟ್ರುಡಾ ಔಷಧಿಯನ್ನು ನೀಡಿದ ರೋಗಿಗಳಿಗೆ ಹೋಲಿಸಿದರೆ, ಈ ಸಂಯೋಜಿತ ಲಸಿಕೆ ಪಡೆದ ರೋಗಿಗಳಲ್ಲಿ ಕ್ಯಾನ್ಸರ್ ಮರುಕಳಿಸುವ ಅಪಾಯ ಶೇ.49 ರಷ್ಟು ಕಡಿಮೆಯಾಗಿದೆ. ಅಲ್ಲದೆ ಕ್ಯಾನ್ಸರ್ ದೇಹದ ಇತರ ಅಂಗಗಳಿಗೆ ಹರಡುವ ಅಪಾಯವೂ ಗಮನಾರ್ಹವಾಗಿ ತಗ್ಗಿದೆ ಎನ್ನುವುದು ಈ ಕಂಪನಿಗಳ ವಾದ.

ಏನಿದು ವೈಯಕ್ತಿಕಗೊಳಿಸಿದ ಎಂಆರ್‌ಎನ್‌ಎ ಲಸಿಕೆ?

ಸಾಮಾನ್ಯ ಲಸಿಕೆಗಳಂತೆ ಇದು ರೋಗ ಬರದಂತೆ ತಡೆಯುವ ಲಸಿಕೆಯಲ್ಲ. ಬದಲಾಗಿ, ಕ್ಯಾನ್ಸರ್ ಪೀಡಿತ ರೋಗಿಯ ದೇಹದಿಂದ ಶಸ್ತ್ರಚಿಕಿತ್ಸೆ ಮೂಲಕ ತೆಗೆದ ಗಡ್ಡೆಯ ಜೆನೆಟಿಕ್ ರೂಪಾಂತರಗಳನ್ನು (Mutations) ಅಧ್ಯಯನ ಮಾಡಿ, ಪ್ರತಿ ರೋಗಿಗೆ ಪ್ರತ್ಯೇಕವಾಗಿ ಈ ಲಸಿಕೆಯನ್ನು ತಯಾರಿಸಲಾಗುತ್ತದೆ. ಈ ಎಂಆರ್‌ಎನ್‌ಎ ತಂತ್ರಜ್ಞಾನವು ರೋಗಿಯ ರೋಗ ನಿರೋಧಕ ವ್ಯವಸ್ಥೆಗೆ (Immune System) ತರಬೇತಿ ನೀಡಿ, ದೇಹದಲ್ಲಿ ಅಡಗಿರುವ ಕ್ಯಾನ್ಸರ್ ಕೋಶಗಳನ್ನು ನಿರ್ದಿಷ್ಟವಾಗಿ ಗುರುತಿಸಿ ನಾಶಪಡಿಸಲು ಸಹಾಯ ಮಾಡುತ್ತದೆ.

ಮುಂದಿನ ವರ್ಷದಿಂದಲೇ ಲಭ್ಯ ಸಾಧ್ಯತೆ

ಪ್ರಯೋಗದಲ್ಲಿ ಯಾವುದೇ ಗಂಭೀರ ಅಡ್ಡಪರಿಣಾಮಗಳು ಕಂಡುಬಂದಿಲ್ಲವಾದ್ದರಿಂದ, ಈ ಲಸಿಕೆಗೆ ಈಗಾಗಲೇ ‘ಬ್ರೇಕ್‌ಥ್ರೂ ಥೆರಪಿ’ ಮಾನ್ಯತೆ ದೊರೆತಿದೆ. ಔಷಧ ನಿಯಂತ್ರಣ ಪ್ರಾಧಿಕಾರಗಳ ಅನುಮೋದನೆ ದೊರೆತರೆ, ಮುಂದಿನ ವರ್ಷದ ವೇಳೆಗೆ ಈ ಲಸಿಕೆ ಸಾರ್ವಜನಿಕ ಬಳಕೆಗೆ ಲಭ್ಯವಾಗುವ ಸಾಧ್ಯತೆಯಿದೆ ಎಂದು ಮಾಡರ್ನಾ ಅಧ್ಯಕ್ಷ ಸ್ಟೀಫನ್ ಹೊಗೆ ತಿಳಿಸಿದ್ದಾರೆ. ಚರ್ಮದ ಕ್ಯಾನ್ಸರ್ ಮಾತ್ರವಲ್ಲದೆ ಶ್ವಾಸಕೋಶ, ಮೇದೋಜ್ಜೀರಕ ಗ್ರಂಥಿ ಮತ್ತು ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲೂ ಈ ಎಂಆರ್‌ಎನ್‌ಎ ತಂತ್ರಜ್ಞಾನವನ್ನು ಬಳಸುವ ಕುರಿತು ಸಂಶೋಧನೆಗಳು ಪ್ರಗತಿಯಲ್ಲಿವೆ.

ಇದನ್ನೂ ಓದಿ : ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ಸಜ್ಜಾದ ಕಿಯಾ ಸೊರೆಂಟೊ : ಇಷ್ಟೊಂದು ಕಡಿಮೆ ಬೆಲೆನಾ?

Tags: BiotechnologyCancer ImmunotherapyCancer ResearchCancer Treatment NewsCancer VaccineHealth NewsKarnataka News beatKNBMedical BreakthroughMedical NewsModerna Cancer VaccineModerna VaccinemRNA Cancer VaccinemRNA Technologyskin cancerSkin Cancer Treatment
SendShareTweet
Previous Post

ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ಸಜ್ಜಾದ ಕಿಯಾ ಸೊರೆಂಟೊ : ಇಷ್ಟೊಂದು ಕಡಿಮೆ ಬೆಲೆನಾ?

Next Post

ಪಶ್ಚಿಮ ಘಟ್ಟದ ಆತಂಕ ನಿವಾರಣೆಗೆ ಭೌತಿಕ ಸರ್ವೆ!?

Related Posts

CEC ಜ್ಞಾನೇಶ್ ಕುಮಾರ್‌ಗೆ ಸಂಕಷ್ಟ : ಮಲೇಷ್ಯಾ ಎಂಜಿನಿಯರ್ ಆತ್ಮಹತ್ಯೆ ಪ್ರಕರಣದ ಮರುತನಿಖೆಗೆ ಕೇರಳ ಸರ್ಕಾರ ಆದೇಶ!
ದೇಶ

CEC ಜ್ಞಾನೇಶ್ ಕುಮಾರ್‌ಗೆ ಸಂಕಷ್ಟ : ಮಲೇಷ್ಯಾ ಎಂಜಿನಿಯರ್ ಆತ್ಮಹತ್ಯೆ ಪ್ರಕರಣದ ಮರುತನಿಖೆಗೆ ಕೇರಳ ಸರ್ಕಾರ ಆದೇಶ!

ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಗೆ ಭಾರತೀಯ ಹೀರೋ ಪೈಲಟ್‌ಗೆ ವಿಶೇಷ ಆಹ್ವಾನ!
ದೇಶ

ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಗೆ ಭಾರತೀಯ ಹೀರೋ ಪೈಲಟ್‌ಗೆ ವಿಶೇಷ ಆಹ್ವಾನ!

ನಾನು ಕಾಕ್‌ಪಿಟ್ ಬಾಗಿಲು ತೆರೆದೆ, ಅವನು ಅದನ್ನು ಮುಚ್ಚಿದ, ಬಳಿಕ…: ಪೈಲಟ್ ಸ್ಮಿತ್ ಮಚ್ಚಾರ್ ಹೇಳಿದ್ದೇನು?
ದೇಶ

ನಾನು ಕಾಕ್‌ಪಿಟ್ ಬಾಗಿಲು ತೆರೆದೆ, ಅವನು ಅದನ್ನು ಮುಚ್ಚಿದ, ಬಳಿಕ…: ಪೈಲಟ್ ಸ್ಮಿತ್ ಮಚ್ಚಾರ್ ಹೇಳಿದ್ದೇನು?

ಕೇಂದ್ರ ಸರ್ಕಾರಿ ನೌಕರರಿಗೆ ದಸರಾಗೂ ಮೊದಲೇ ತುಟ್ಟಿಭತ್ಯೆ?
ದೇಶ

ಕೇಂದ್ರ ಸರ್ಕಾರಿ ನೌಕರರಿಗೆ ದಸರಾಗೂ ಮೊದಲೇ ತುಟ್ಟಿಭತ್ಯೆ?

ತಿಂಗಳ ಮೊದಲ ದಿನವೇ LPG ಬೆಲೆಯೇರಿಕೆಯ ಶಾಕ್!
ದೇಶ

ತಿಂಗಳ ಮೊದಲ ದಿನವೇ LPG ಬೆಲೆಯೇರಿಕೆಯ ಶಾಕ್!

ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿ ಘೋಷಿಸಿದ ಕೇಂದ್ರ!
ದೇಶ

ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿ ಘೋಷಿಸಿದ ಕೇಂದ್ರ!

Next Post
ಪಶ್ಚಿಮ ಘಟ್ಟದ ಆತಂಕ ನಿವಾರಣೆಗೆ ಭೌತಿಕ ಸರ್ವೆ!?

ಪಶ್ಚಿಮ ಘಟ್ಟದ ಆತಂಕ ನಿವಾರಣೆಗೆ ಭೌತಿಕ ಸರ್ವೆ!?

  • Trending
  • Comments
  • Latest
ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

CEC ಜ್ಞಾನೇಶ್ ಕುಮಾರ್‌ಗೆ ಸಂಕಷ್ಟ : ಮಲೇಷ್ಯಾ ಎಂಜಿನಿಯರ್ ಆತ್ಮಹತ್ಯೆ ಪ್ರಕರಣದ ಮರುತನಿಖೆಗೆ ಕೇರಳ ಸರ್ಕಾರ ಆದೇಶ!

CEC ಜ್ಞಾನೇಶ್ ಕುಮಾರ್‌ಗೆ ಸಂಕಷ್ಟ : ಮಲೇಷ್ಯಾ ಎಂಜಿನಿಯರ್ ಆತ್ಮಹತ್ಯೆ ಪ್ರಕರಣದ ಮರುತನಿಖೆಗೆ ಕೇರಳ ಸರ್ಕಾರ ಆದೇಶ!

ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಗೆ ಭಾರತೀಯ ಹೀರೋ ಪೈಲಟ್‌ಗೆ ವಿಶೇಷ ಆಹ್ವಾನ!

ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಗೆ ಭಾರತೀಯ ಹೀರೋ ಪೈಲಟ್‌ಗೆ ವಿಶೇಷ ಆಹ್ವಾನ!

ನಾನು ಕಾಕ್‌ಪಿಟ್ ಬಾಗಿಲು ತೆರೆದೆ, ಅವನು ಅದನ್ನು ಮುಚ್ಚಿದ, ಬಳಿಕ…: ಪೈಲಟ್ ಸ್ಮಿತ್ ಮಚ್ಚಾರ್ ಹೇಳಿದ್ದೇನು?

ನಾನು ಕಾಕ್‌ಪಿಟ್ ಬಾಗಿಲು ತೆರೆದೆ, ಅವನು ಅದನ್ನು ಮುಚ್ಚಿದ, ಬಳಿಕ…: ಪೈಲಟ್ ಸ್ಮಿತ್ ಮಚ್ಚಾರ್ ಹೇಳಿದ್ದೇನು?

ಗದಗ ಜಿಲ್ಲಾ ನ್ಯಾಯಾಲಯದಲ್ಲಿ 22 ಹುದ್ದೆಗಳ ನೇಮಕಾತಿ!

ಗದಗ ಜಿಲ್ಲಾ ನ್ಯಾಯಾಲಯದಲ್ಲಿ 22 ಹುದ್ದೆಗಳ ನೇಮಕಾತಿ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

CEC ಜ್ಞಾನೇಶ್ ಕುಮಾರ್‌ಗೆ ಸಂಕಷ್ಟ : ಮಲೇಷ್ಯಾ ಎಂಜಿನಿಯರ್ ಆತ್ಮಹತ್ಯೆ ಪ್ರಕರಣದ ಮರುತನಿಖೆಗೆ ಕೇರಳ ಸರ್ಕಾರ ಆದೇಶ!

CEC ಜ್ಞಾನೇಶ್ ಕುಮಾರ್‌ಗೆ ಸಂಕಷ್ಟ : ಮಲೇಷ್ಯಾ ಎಂಜಿನಿಯರ್ ಆತ್ಮಹತ್ಯೆ ಪ್ರಕರಣದ ಮರುತನಿಖೆಗೆ ಕೇರಳ ಸರ್ಕಾರ ಆದೇಶ!

ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಗೆ ಭಾರತೀಯ ಹೀರೋ ಪೈಲಟ್‌ಗೆ ವಿಶೇಷ ಆಹ್ವಾನ!

ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಗೆ ಭಾರತೀಯ ಹೀರೋ ಪೈಲಟ್‌ಗೆ ವಿಶೇಷ ಆಹ್ವಾನ!

  • About
  • Advertise
  • Privacy & Policy
  • Contact Us

© 2025 News beat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 News beat