ಬೆಂಗಳೂರು : ಇಂದಿನ ಡಿಜಿಟಲ್ ಯುಗದಲ್ಲಿ, ಆಧಾರ್ ಕಾರ್ಡ್ ಭಾರತೀಯರ ಪ್ರಮುಖ ಗುರುತಿನ ಚೀಟಿಯಾಗಿದೆ. ಬ್ಯಾಂಕ್ ಖಾತೆ, ಸರ್ಕಾರಿ ಸಬ್ಸಿಡಿಗಳು, ಪ್ಯಾನ್ ಕಾರ್ಡ್ ಲಿಂಕ್ ಮತ್ತು ಇತರೆ ಆನ್ ಲೈನ್ ಸೇವೆಗಳನ್ನು ಪಡೆಯಲು ಆಧಾರ್ ನೊಂದಿಗೆ ನೋಂದಾಯಿತ ಮೊಬೈಲ್ ಸಂಖ್ಯೆ ಜೋಡಣೆಯಾಗಿರುವುದು ಕಡ್ಡಾಯ. ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹಳೆಯ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಬೇಕಾದರೆ ಅಥವಾ ಹೊಸ ಸಂಖ್ಯೆಯನ್ನು ಸೇರಿಸಬೇಕಾದರೆ ಅನುಸರಿಸಬೇಕಾದ ಪ್ರಕ್ರಿಯೆಯ ಮಾಹಿತಿ ಇಲ್ಲಿದೆ. ಅದರಲ್ಲೂ ಈಗ ನಿಮ್ಮ ಮೊಬೈಲ್ ನಲ್ಲಿಯೇ ಅಪ್ಡೇಟ್ ಮಾಡಬಹುದು.
ಸ್ಟೆಪ್ ಬೈ ಸ್ಟೆಪ್ ಗೈಡೆನ್ಸ್
• ಆ್ಯಪ್ ತೆರೆಯಿರಿ: ಮೊದಲು ನಿಮ್ಮ ಮೊಬೈಲ್ ನಲ್ಲಿ ಆಧಾರ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ. ನಿಮ್ಮ ಆಧಾರ್ ಆಧಾರಿತ ದೃಢೀಕರಣದೊಂದಿಗೆ ಲಾಗಿನ್ ಆಗಿ.
• ಸೇವೆಗಳ ಆಯ್ಕೆ: ಆ್ಯಪ್ ನ ಹೋಮ್ ಪೇಜ್ ನಲ್ಲಿರುವ ‘Services’ (ಸೇವೆಗಳು) ಮೇಲೆ ಕ್ಲಿಕ್ ಮಾಡಿ.
• ಅಪ್ಡೇಟ್ ಆಯ್ಕೆ: ಅಲ್ಲಿ ಕಾಣಿಸುವ ಪಟ್ಟಿಯಲ್ಲಿ ‘Update Mobile Number’ ಮೇಲೆ ಕ್ಲಿಕ್ ಮಾಡಿ.
• ಸಂಖ್ಯೆ ನಮೂದಿಸಿ: ನಿಮ್ಮ ಹೊಸ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
• OTP ಪರಿಶೀಲನೆ: ನಿಮ್ಮ ಹೊಸ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ನಮೂದಿಸುವ ಮೂಲಕ ಪರಿಶೀಲನೆ ಪೂರ್ಣಗೊಳಿಸಿ.
• ಅರ್ಜಿ ಸಲ್ಲಿಕೆ: ದೃಢೀಕರಣ ಪ್ರಕ್ರಿಯೆ ಪೂರ್ಣಗೊಂಡ ನಂತರ, ನಿಮ್ಮ ವಿನಂತಿಯು UIDAI ಗೆ ಸಲ್ಲಿಕೆಯಾಗುತ್ತದೆ.
ಗಮನಿಸಬೇಕಾದ ಅಂಶ
ಈ ಸೇವೆಯನ್ನು ಪಡೆಯಲು ಬಳಕೆದಾರರು ನಾಮಮಾತ್ರದ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ವರದಿಗಳ ಪ್ರಕಾರ, ಈ ಪ್ರಕ್ರಿಯೆಗೆ 75 ರೂಪಾಯಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ನಿಮ್ಮ ದಾಖಲೆಗಳನ್ನು ಸರಿಯಾಗಿ ನಿರ್ವಹಿಸಲು ಮತ್ತು ಸರ್ಕಾರಿ ಯೋಜನೆಗಳ ಲಾಭ ಪಡೆಯಲು ನಿಮ್ಮ ಆಧಾರ್ ನಲ್ಲಿ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಿಟ್ಟುಕೊಳ್ಳುವುದು ಅತ್ಯಗತ್ಯ.
ಹೆಚ್ಚಿನ ಮಾಹಿತಿಗಾಗಿ UIDAI ನ ಅಧಿಕೃತ ವೆಬ್ಸೈಟ್ ಅಥವಾ ಸಮೀಪದ ಆಧಾರ್ ಕೇಂದ್ರವನ್ನು ಸಂಪರ್ಕಿಸಿ. ಯಾವುದೇ ಗೊಂದಲವಿದ್ದಲ್ಲಿ ಆ್ಯಪ್ ನಲ್ಲಿನ ಅಧಿಕೃತ ಮಾರ್ಗದರ್ಶನವನ್ನು ಅನುಸರಿಸಿ.
ಇದನ್ನೂ ಓದಿ : ಜಿಲ್ಲಾ ನ್ಯಾಯಾಲಯದಲ್ಲಿ 78 ಹುದ್ದೆಗಳ ನೇಮಕಾತಿ : ಈ ಜಿಲ್ಲೆಯವರಿಗಿದು ಗುಡ್ ನ್ಯೂಸ್



















