ಬೆಂಗಳೂರು : ನಗರದಲ್ಲಿ ಪುಡಿ ರೌಡಿಗಳ ಹಾವಳಿ ಮತ್ತೆ ಮಿತಿಮೀರಿದ್ದು, ಎರಡು ಗುಂಪುಗಳ ನಡುವೆ ನಡೆದ ಭೀಕರ ಮಾರಾಮಾರಿಯಲ್ಲಿ ಲಾಂಗ್, ಮಚ್ಚುಗಳನ್ನು ಝಳಪಿಸಿದ ಘಟನೆ ಜೆ.ಸಿ. ರಸ್ತೆಯ ವಿನೋಬನಗರದಲ್ಲಿ ನಡೆದಿದೆ.
ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ಸಂಜೆ ಸುಮಾರು 6 ಗಂಟೆ ವೇಳೆಗೆ ದೊಡ್ಡಿವಂಶ ಮತ್ತು ವಿನೋಬನಗರದ ಮೌಲಾನ ಕಡೆಯವರ ನಡುವೆ ಹಳೆಯ ವೈಷಮ್ಯದ ಹಿನ್ನೆಲೆ ಗಲಾಟೆ ಆರಂಭವಾಗಿ, ಕ್ಷಣಾರ್ಧದಲ್ಲಿ ಮಾರಾಮಾರಿಗೆ ತಿರುಗಿದೆ.
ಈ ವೇಳೆ ಎರಡೂ ಕಡೆಯವರು ಲಾಂಗ್-ಮಚ್ಚುಗಳಿಂದ ಪರಸ್ಪರ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗುತ್ತಿದೆ.
ಘಟನಾ ಸಂಬಂಧ ಅಜಮ್, ಅಮ್ಜದ್, ಅವೈಜ್, ಮುಬಾರಕ್ ಹಾಗೂ ಖಲೀಲ್ ಸೇರಿದಂತೆ ಹಲವರ ವಿರುದ್ಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಮೈಸೂರಲ್ಲಿ ಸಿದ್ದು-ಮಹದೇವಪ್ಪ ಯುಗ ಅಂತ್ಯ? ಅಧಿಕಾರದಿಂದ ದೂರವಾದ ದೋಸ್ತಿಗಳು!



















