ಬೆಂಗಳೂರು : ಮ್ಯೂಚುವಲ್ ಫಂಡ್ ಎಸ್ಐಪಿಯಲ್ಲಿ ಹೂಡಿಕೆಯು ಶ್ರೀಮಂತರಿಗೆ ಮಾತ್ರ ಸೀಮಿತ. ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳ ಅಥವಾ ಆದಾಯ ಇರುವವರು ಮಾತ್ರ ಎಸ್ಐಪಿಯಲ್ಲಿ ಹೂಡಿಕೆ ಮಾಡಬಹುದು ಎಂಬ ತಪ್ಪು ಕಲ್ಪನೆ ತುಂಬ ಜನರಲ್ಲಿದೆ. ಆದರೆ, ತಿಂಗಳಿಗೆ ಕೇವಲ 500 ರೂಪಾಯಿಯನ್ನೂ ಎಸ್ಐಪಿಯಲ್ಲಿ ಹೂಡಿಕೆ ಮಾಡಬಹುದು ಹಾಗೂ ಅದರಿಂದಲೇ ಲಕ್ಷಾಂತರ ರೂಪಾಯಿ (Monthly SIP) ಗಳಿಸಬಹುದು ಎಂಬುದು ತುಂಬ ಜನರಿಗೆ ಗೊತ್ತಿಲ್ಲ. ಆ ಮ್ಯಾಜಿಕ್ ಲೆಕ್ಕಾಚಾರ ಇಲ್ಲಿದೆ.
ಹೌದು, ಮ್ಯೂಚುವಲ್ ಫಂಡ್ ಎಸ್ಐಪಿಯಲ್ಲಿ ನೀವು ಮಾಸಿಕ 520 ರೂಪಾಯಿ ಹೂಡಿಕೆ ಮಾಡಿಯೂ ಲಕ್ಷಾಂತರ ರೂಪಾಯಿ ಗಳಿಸಬಹುದು. ನೀವು 5 ವರ್ಷಗಳವರೆಗೆ ಮಾಸಿಕ 520 ರೂಪಾಯಿ ಹೂಡಿಕೆ ಮಾಡಿದರೆ, ನೀವು ಒಟ್ಟು 31,200 ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ. ಇದಕ್ಕೆ ಕನಿಷ್ಠ ಶೇ.12ರಷ್ಟು ರಿಟರ್ನ್ಸ್ ಎಂದರೂ 5 ವರ್ಷಗಳ ಬಳಿಕ ನಿಮಗೆ ಒಟ್ಟು 42,800 ರೂಪಾಯಿ ಲಭಿಸಲಿದೆ.
ಇದೇ ರೀತಿ ನೀವು 10 ವರ್ಷಗಳವರೆಗೆ ತಿಂಗಳಿಗೆ 520 ರೂಪಾಯಿ ಹೂಡಿಕೆ ಮಾಡಿದರೆ, ಒಟ್ಟು 62,400 ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ. ಇದಕ್ಕೆ ಶೇ.12ರಷ್ಟು ರಿಟರ್ನ್ಸ್ ಎಂದರೂ ಒಟ್ಟು 1.2 ಲಕ್ಷ ರೂಪಾಯಿ ನಿಮ್ಮದಾಗುತ್ತದೆ. ಅದರಂತೆ, ದೀರ್ಘಾವಧಿ ಹೂಡಿಕೆ ಎಂದರೆ, 20 ವರ್ಷಗಳವರೆಗೆ ಹೂಡಿಕೆ ಮಾಡಿದರೆ ನೀವು ಒಟ್ಟು 5.19 ಲಕ್ಷ ರೂಪಾಯಿ ಗಳಿಸಬಹುದಾಗಿದೆ. ಆ ಮೂಲಕ ನೀವು ಕೂಡ ಲಕ್ಷಾಧೀಶ್ವರರು ಆಗಬಹುದಾಗಿದೆ.
ಮ್ಯೂಚುವಲ್ ಫಂಡ್ ಎಸ್ಐಪಿಯಲ್ಲಿ ಕಂಪೌಂಡಿಂಗ್ ಅಥವಾ ಚಕ್ರಬಡ್ಡಿಯ ಲಾಭ ದೊರೆಯುವುದರಿಂದ ದೀರ್ಘಾವಧಿ ಹೂಡಿಕೆದಾರರಿಗೆ ಇದು ಲಾಭ ತರಲಿದೆ. ನನ್ನ ಆದಾಯ ಕಡಿಮೆ ಇದೆ, ಸಂಬಳ ಕಡಿಮೆ ಇದೆ ಎಂಬ ಕಾರಣಕ್ಕಾಗಿ ಸಾವಿರಾರು ರೂಪಾಯಿ ಉಳಿಸಲು ಆಗದವರು ಎಸ್ಐಪಿಯಲ್ಲಿ ಕೇವಲ 520 ರೂ. ಹೂಡಿಕೆ ಮಾಡಿ ಲಕ್ಷಾಂತರ ರೂ. ಗಳಿಸಬಹುದು.
ಡಿಸ್ಕ್ಲೇಮರ್
ಮ್ಯೂಚುವಲ್ ಫಂಡ್ ಎಸ್ಐಪಿ ಹೂಡಿಕೆಯ ಲಾಭಗಳು ಮಾರುಕಟ್ಟೆಯ ಏರಿಳಿತವನ್ನು ಆಧರಿಸಿರುತ್ತವೆ. ಅಂದರೆ, ಹೂಡಿಕೆಯು ರಿಸ್ಕ್ ನಿಂದ ಕೂಡಿರುತ್ತದೆ. ಮಾಹಿತಿ ನೀಡುವ ದೃಷ್ಟಿಯಿಂದ ಮಾತ್ರ ಲೇಖನವನ್ನು ಪ್ರಕಟಿಸಲಾಗಿದೆ. ಯಾವುದೇ ಮಾದರಿಯ ಹೂಡಿಕೆಗೂ ಮೊದಲು ತಜ್ಞರ ಸಲಹೆ-ಸೂಚನೆ ಪಡೆಯುವುದು ಕಡ್ಡಾಯವಾಗಿದೆ.
ಇದನ್ನೂ ಓದಿ : 33ನೇ ವಯಸ್ಸಲ್ಲಿ ಒಲಿದ ಅದೃಷ್ಟ.. ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಸರಾಂಶ್ ಜೈನ್ ಎಂಟ್ರಿ!



















