ಬೆಂಗಳೂರು, ಜು.16 : ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಯುಜಿಸಿಇಟಿ (UGCET)–2026ರ ಮೊದಲ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಪ್ರಕಟಿಸಿದೆ. ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಹಾಗೂ ಫಾರ್ಮಸಿ ಕೋರ್ಸ್‌ಗಳನ್ನು ಹೊರತುಪಡಿಸಿ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಒಟ್ಟು 1,41,872 ಸೀಟುಗಳ ಪೈಕಿ 1,22,512 ಸೀಟುಗಳನ್ನು ಮೊದಲ ಸುತ್ತಿನಲ್ಲೇ ಹಂಚಿಕೆ ಮಾಡಲಾಗಿದೆ. 19,374 ಸೀಟುಗಳು ಇನ್ನೂ ಖಾಲಿ ಉಳಿದಿವೆ.
ಎಂಜಿನಿಯರಿಂಗ್ ಕೋರ್ಸ್‌ನಲ್ಲಿ ಒಟ್ಟು 91,724 ಸೀಟುಗಳ ಪೈಕಿ 90,748 ಸೀಟುಗಳು ಭರ್ತಿಯಾಗಿದ್ದು, ಕೇವಲ 976 ಸೀಟುಗಳು ಮಾತ್ರ ಉಳಿದಿವೆ. ಪಶು ವೈದ್ಯಕೀಯ ಕೋರ್ಸ್‌ನಲ್ಲಿ ಲಭ್ಯವಿದ್ದ 361 ಸೀಟುಗಳೂ ಸಂಪೂರ್ಣ ಭರ್ತಿಯಾಗಿವೆ.
ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆ ಪಡೆದಿರುವ ಅಭ್ಯರ್ಥಿಗಳು ಜುಲೈ 24ರೊಳಗೆ ಸಂಬಂಧಿತ ಕಾಲೇಜುಗಳಿಗೆ ಹಾಜರಾಗಿ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚಿಸಿದೆ.
ಮೊದಲ ಸುತ್ತಲ್ಲಿ ಹಂಚಿಕೆಯಾದ ಕೋರ್ಸ್ ವಾರು ಪಟ್ಟಿ
ಕೋರ್ಸ್- ಎಂಜಿನಿಯರಿಂಗ್
ಒಟ್ಟು ಸೀಟು – 91,724
ಹಂಚಿಕೆಯಾದ ಸೀಟು- 90,748
ಕೋರ್ಸ್- ಕೃಷಿ ವಿಜ್ಞಾನ
ಒಟ್ಟು ಸೀಟು – 3,915
ಹಂಚಿಕೆಯಾದ ಸೀಟು- 3,897
ಕೋರ್ಸ್- ನರ್ಸಿಂಗ್
ಒಟ್ಟು ಸೀಟು – 35,862
ಹಂಚಿಕೆಯಾದ ಸೀಟು- 18,025
ಕೋರ್ಸ್-
ಒಟ್ಟು ಸೀಟು –
ಹಂಚಿಕೆಯಾದ ಸೀಟು
ಕೋರ್ಸ್- ಪಶು ವೈದ್ಯಕೀಯ
ಒಟ್ಟು ಸೀಟು – 361
ಹಂಚಿಕೆಯಾದ ಸೀಟು- 361
ಕೋರ್ಸ್- ಎಎಚ್ ಎಸ್
ಒಟ್ಟು ಸೀಟು – 7,457
ಹಂಚಿಕೆಯಾದ ಸೀಟು- 6,962
ಕೋರ್ಸ್- ಬಿಪಿಟಿ
ಒಟ್ಟು ಸೀಟು – 2,062
ಹಂಚಿಕೆಯಾದ ಸೀಟು- 2037
ಕೋರ್ಸ್- ಯೋಗಾ- ನಾಚುರೋಪತಿ
ಒಟ್ಟು ಸೀಟು – 496
ಹಂಚಿಕೆಯಾದ ಸೀಟು- 482
ಒಟ್ಟು ಸೀಟು- 1,41,872
ಹಂಚಿಕೆಯಾದ ಸೀಟು- 1,22,512
ಒಟ್ಟಾರೆ ಮೊದಲ ಸುತ್ತಿನಲ್ಲೇ ಹೆಚ್ಚಿನ ಪ್ರಮಾಣದ ಸೀಟುಗಳು ಭರ್ತಿಯಾಗಿದ್ದು, ವಿಶೇಷವಾಗಿ ಎಂಜಿನಿಯರಿಂಗ್ ಮತ್ತು ಪಶು ವೈದ್ಯಕೀಯ ಕೋರ್ಸ್‌ಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ನರ್ಸಿಂಗ್ ಸೇರಿದಂತೆ ಕೆಲವು ಕೋರ್ಸ್‌ಗಳಲ್ಲಿ ಮಾತ್ರ ಗಮನಾರ್ಹ ಸಂಖ್ಯೆಯ ಸೀಟುಗಳು ಮುಂದಿನ ಸುತ್ತುಗಳಿಗೆ ಉಳಿದಿವೆ.
ಇದನ್ನೂ ಓದಿ : ಸಿಎ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ : ಸೆಪ್ಟೆಂಬರ್-ನವೆಂಬರ್ ಪರೀಕ್ಷೆಗಳಿಗೆ ನೋಂದಣಿ ಆರಂಭ!


















