ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಶ್ರೀ ಬಾಲಮುರಳಿ ಮ್ಯೂಸಿಕಲ್ ಗ್ರೂಪ್ ವತಿಯಿಂದ ಇದೇ ಬರುವ ಜುಲೈ 12 (ಭಾನುವಾರ)ರಂದು ಸಂಜೆ 4:30ಕ್ಕೆ ನಂಜುಮಳಿಗೆ ಸರ್ಕಲ್‌ನ ನಾದಬ್ರಹ್ಮ ಸಂಗೀತ ಸಭಾದಲ್ಲಿ ‘ಮಧುರ ಗೀತೆಗಳ ಸುಮಧುರ ಸಂಜೆ’ ಕರೋಕೆ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ, ಕರ್ನಾಟಕ ಸುಗಮ ಸಂಗೀತ ಪರಿಷತ್ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಡಾ. ನಾಗರಾಜ್ ವಿ.ಬೈರಿ, ಆಟೋಮೋಟಿವ್ ಆಕ್ಸಲ್ಸ್ ಲಿಮಿಟೆಡ್ ಅಧ್ಯಕ್ಷ ನಾಗರಾಜ ಗರ್ಗೇಶ್ವರಿ, ಕನ್ನಡಪ್ರಭ ಕಾರ್ಯನಿರ್ವಾಹಕ ಸಂಪಾದಕ ಅಂಶಿ ಪ್ರಸನ್ನಕುಮಾರ್ ಹಾಗೂ ಖ್ಯಾತ ಉರಗ ತಜ್ಞ ಮತ್ತು ಮಾಜಿ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಸ್ನೇಕ್ ಶಾಮ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

‘ಮಧುರ ಗೀತೆಗಳ ಸುಮಧುರ ಸಂಜೆ’ ಕಾರ್ಯಕ್ರಮದಲ್ಲಿ ಕರೋಕೆ ಗಾಯನದ ಮೂಲಕ ವಿವಿಧ ಕನ್ನಡ ಹಾಗೂ ಚಲನಚಿತ್ರ ಗೀತೆಗಳನ್ನು ಸಂಗೀತಾಭಿಮಾನಿಗಳ ಮುಂದೆ ಪ್ರಸ್ತುತಪಡಿಸಲಾಗುತ್ತಿದ್ದು, ಸಂಗೀತಾಸಕ್ತರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನು, ಕಾರ್ಯಕ್ರಮದ ನಿರೂಪಣೆಯನ್ನು ವೆಂಕಟೇಶ್ ಕೆ.ಜಿ ಅವರು ನಡೆಸಲಿದ್ದು, ಶ್ರೀ ಬಾಲಮುರಳಿ ಮ್ಯೂಸಿಕಲ್ ಗ್ರೂಪ್ ವತಿಯಿಂದ ಸಿದ್ಧತೆಗಳು ಭರದಿಂದ ಸಾಗಿವೆ. ಸಂಗೀತಾಸಕ್ತರು ಹೆಚ್ಚಿನ ಮಾಹಿತಿಗಾಗಿ 9036813076, 9964819884 ಹಾಗೂ 8904903228 ಸಂಖ್ಯೆಗಳನ್ನು ಸಂಪರ್ಕಿಸಬಹುದು.
ಇದನ್ನೂ ಓದಿ ; ಸ್ಯಾಮ್ಸನ್ ಕಮ್‌ಬ್ಯಾಕ್‌ಗೆ ವೇದಿಕೆ ಸಿದ್ಧ ; ನಾಲ್ಕನೇ ಟಿ20ಯಲ್ಲಿ ಯಾರಿಗೆ ತಪ್ಪಲಿದೆ ಅವಕಾಶ?



















