ಬೆಂಗಳೂರಿನ : ನಗರದ ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನಯಿಂದಲೇ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಬ್ಯಾಟರಾಯನಪುರದ ಶಾಮಣ್ಣ ಗಾರ್ಡನ್ ನಿವಾಸಿ ಅಕ್ಬರ್ ಷರೀಫ್ ಮನೆ ಮೇಲೆ ದಾಳಿ ನಡೆಸಿದ ವೇಳೆ ಸುಮಾರು 771 ಗ್ರಾಂ ಗಾಂಜಾ, 237 ಮೊಬೈಲ್ ಫೋನ್‌ಗಳು ಹಾಗೂ 18 ಮಾರಕಾಸ್ತ್ರಗಳು ಪತ್ತೆಯಾಗಿದ್ದು, ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ಮಾಹಿತಿ ಪ್ರಕಾರ, ಅಕ್ಬರ್ ಷರೀಫ್ ಮತ್ತು ಅವರ ಕುಟುಂಬ ಮನೆಯಿಂದಲೇ ಗಾಂಜಾ ಮಾರಾಟ ಮಾಡುತ್ತಿದ್ದರು. ಗಾಂಜಾ ಖರೀದಿಸಲು ಹಣವಿಲ್ಲದವರಿಗೆ ಮೊಬೈಲ್ ಫೋನ್ ಪಡೆದು ಅದರ ಬದಲಿಗೆ ಗಾಂಜಾ ನೀಡುತ್ತಿದ್ದ ಆರೋಪವೂ ಕೇಳಿಬಂದಿದೆ. ಅಲ್ಲದೆ, ಜನರಲ್ಲಿ ಭಯ ಹುಟ್ಟಿಸಲು ಮನೆಯಲ್ಲಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡಿದ್ದ ಎನ್ನಲಾಗಿದೆ.
ಬಂಧಿತ ಅಕ್ಬರ್ ಷರೀಫ್ ವಿರುದ್ಧ ಈ ಹಿಂದೆಯೂ ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಇದೀಗ ಮತ್ತೊಂದು ಪ್ರಕರಣವನ್ನು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಪೊಲೀಸರು, ವಶಪಡಿಸಿಕೊಂಡಿರುವ ಮೊಬೈಲ್‌ಗಳ ಮೂಲ ಮತ್ತು ಈ ಜಾಲದ ಹಿಂದೆ ಇನ್ನೂ ಯಾರಾದರೂ ಇದ್ದಾರೆಯೇ ಎಂಬ ಬಗ್ಗೆ ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ : ಗಂಗಾವತಿ ಬಯಲು ರಂಗಮಂದಿರ ತೆರವಿಗೆ ಕರವೇ ವಿರೋಧ : ಫುಡ್ ಸ್ಟ್ರೀಟ್ ಯೋಜನೆ ಕೈಬಿಡುವಂತೆ ಡಿಸಿಗೆ ಮನವಿ!



















