ಬೆಂಗಳೂರು : ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್ಒ) ಇಪಿಎಫ್ ಪೋರ್ಟಲ್ ಅನ್ನು ಇತ್ತೀಚೆಗೆ ಅಪ್ ಗ್ರೇಡ್ ಮಾಡಿದೆ. ಹಾಗಾಗಿ, ಪಿಎಫ್ ಖಾತೆದಾರರ ಸೇವೆಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳಾಗಿವೆ. ಯುಎಎನ್ ಸಕ್ರಿಯಗೊಳಿಸುವುದು ಸೇರಿ ಸದಸ್ಯರಿಗೆ ಕ್ಷಿಪ್ರವಾಗಿ ಸೇವೆಗಳು ಲಭ್ಯವಾಗಲಿ ಎಂದು ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಹಾಗಾದರೆ, ಹೊಸ ಪೋರ್ಟಲ್ ನಲ್ಲಿ ಏನೆಲ್ಲ ಬದಲಾವಣೆ ಮಾಡಲಾಗಿದೆ ಎಂಬುದನ್ನು ತಿಳಿಯೋಣ ಬನ್ನಿ.
- ಯುಎಎನ್ ಸಕ್ರಿಯಗೊಳಿಸುವಿಕೆ
ಇದಕ್ಕೂ ಮೊದಲು ವೆಬ್ ಸೈಟ್ ಮೂಲಕ ಮಾಡಲಾಗುತ್ತಿದ್ದ UAN ಸಕ್ರಿಯಗೊಳಿಸುವಿಕೆಯನ್ನು ಈಗ ವೆಬ್ ಪೋರ್ಟಲ್ ನಿಂದ ತೆಗೆದುಹಾಕಲಾಗಿದೆ. ಇನ್ನು ಮುಂದೆ ಬಳಕೆದಾರರು ಸರ್ಕಾರದ UMANG (ಉಮಾಂಗ್) ಆ್ಯಪ್ ಮೂಲಕವೇ UAN ಸಕ್ರಿಯಗೊಳಿಸಬೇಕು.
ಹೇಗೆ ಮಾಡುವುದು?: UMANG ಆ್ಯಪ್ ನಲ್ಲಿ ‘EPFO Services’ ವಿಭಾಗಕ್ಕೆ ಹೋಗಿ, “UAN Services Through Face Auth” ಅಡಿಯಲ್ಲಿ “UAN Activation” ಆಯ್ಕೆ ಮಾಡಿಕೊಂಡು ಆಧಾರ್ ಫೇಸ್ ಅಥೆಂಟಿಕೇಶನ್ ಮೂಲಕ ಸಕ್ರಿಯಗೊಳಿಸಬಹುದು. - ಹೊಸ ಯುಎಎನ್ ಜನರೇಷನ್
ಹೊಸದಾಗಿ ಸೇರುವ ಉದ್ಯೋಗಿಗಳು ನೇರವಾಗಿ ವೆಬ್ ಪೋರ್ಟಲ್ ಮೂಲಕ ಹೊಸ UAN ಸೃಷ್ಟಿಸುವ ಸೌಲಭ್ಯವನ್ನು ನಿಲ್ಲಿಸಲಾಗಿದೆ. ಇದನ್ನೂ UMANG ಆ್ಯಪ್ ನಲ್ಲಿ “UAN Allotment and Activation” ಆಯ್ಕೆಯ ಮೂಲಕ, ಆಧಾರ್ ಫೇಸ್ ಅಥೆಂಟಿಕೇಶನ್ ಬಳಸಿ ಪಡೆಯಬೇಕಾಗುತ್ತದೆ. - ಮರೆತುಹೋದ ಯುಎಎನ್ ಪತ್ತೆಹಚ್ಚುವುದು
ಒಂದು ವೇಳೆ ನೀವು UAN ಮರೆತಿದ್ದರೆ, ಅದನ್ನು ಪೋರ್ಟಲ್ ಮೂಲಕ ಸುಲಭವಾಗಿ ಪತ್ತೆಹಚ್ಚಬಹುದು. ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಒಟಿಪಿ (OTP) ಪರಿಶೀಲನೆಯ ಮೂಲಕ ನಿಮ್ಮ UAN ಸಂಖ್ಯೆಯನ್ನು ಪಡೆಯಬಹುದು. - ಡೆತ್ ಕ್ಲೇಮ್ ಸಲ್ಲಿಕೆ
ಮರಣ ಹೊಂದಿದ ಖಾತೆದಾರರ ನಾಮಿನಿಗಳು ಪಿಎಫ್ ಮತ್ತು ಪೆನ್ಶನ್ ಹಣಕ್ಕಾಗಿ ಇ-ಫೈಲಿಂಗ್ ಮಾಡುವ ಸೌಲಭ್ಯವು ಪೋರ್ಟಲ್ನಲ್ಲಿ ಮುಂದುವರಿದಿದೆ. ಕ್ಲೇಮ್ ಸಲ್ಲಿಸುವಾಗ ಕೆಲವು ಅಂಶಗಳನ್ನು ಗಮನಿಸಬೇಕು. ಫಲಾನುಭವಿಯ ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಚಾಲ್ತಿಯಲ್ಲಿರಬೇಕು. ಬ್ಯಾಂಕ್ ಖಾತೆ ವಿವರಗಳು ಸರಿಯಾಗಿರಬೇಕು. ಮರಣ ಪ್ರಮಾಣಪತ್ರ, ಬ್ಯಾಂಕ್ ಪಾಸ್ ಬುಕ್ ಅಥವಾ ಕ್ಯಾನ್ಸಲ್ಡ್ ಚೆಕ್ ಮತ್ತು ವಯಸ್ಸಿನ ಪುರಾವೆಗಳನ್ನು ಪಿಡಿಎಫ್ ರೂಪದಲ್ಲಿ ಅಪ್ ಲೋಡ್ ಮಾಡಬೇಕು. (ಫೈಲ್ ಗಾತ್ರ 2 MB ಗಿಂತ ಹೆಚ್ಚಿರಬಾರದು ಮತ್ತು ಫೈಲ್ ಹೆಸರಿನಲ್ಲಿ ಯಾವುದೇ ಸ್ಪೇಸ್ ಇರಬಾರದು).
ಇದನ್ನೂ ಓದಿ : NIMHANS ಸಂಸ್ಥೆಯಲ್ಲಿ 6 ಕೌನ್ಸೆಲರ್ ಹುದ್ದೆಗಳ ನೇಮಕಾತಿ : ಸಂದರ್ಶನದ ದಿನಾಂಕ ಇಲ್ಲಿದೆ



















