ಬೆಂಗಳೂರು: ದೇಶದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆ (PM-Vidyalaxmi Scheme) ಜಾರಿಗೆ ತಂದಿದೆ. ಪ್ರತಿಭಾವಂತ ವಿದ್ಯಾರ್ಥಿಗಳು ಆರ್ಥಿಕ ಮುಗ್ಗಟ್ಟಿನಿಂದಾಗಿ ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ಧೇಶದಿಂದ ಯೋಜನೆ ಜಾರಿಗೆ ತರಲಾಗಿದೆ. ಇದರ ಅನ್ವಯ, ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ 7.5 ಲಕ್ಷ ರೂಪಾಯಿವರೆಗೆ ಕಡಿಮೆ ಬಡ್ಡಿಗೆ ಸಾಲ ಪಡೆಯಬಹುದಾಗಿದೆ.
ಯೋಜನೆಯ ಪ್ರಮುಖ ವೈಶಿಷ್ಟ್ಯಗಳು
ಶ್ಯೂರಿಟಿ ಅಥವಾ ಗ್ಯಾರಂಟಿ ಇಲ್ಲ: ಈ ಯೋಜನೆಯಡಿ ಶಿಕ್ಷಣ ಸಾಲ ಪಡೆಯಲು ಯಾವುದೇ ಆಸ್ತಿಯನ್ನು ಅಡಮಾನ ಇಡಬೇಕಾಗಿಲ್ಲ ಅಥವಾ ಯಾವುದೇ ಗ್ಯಾರಂಟರ್ (ಜಾಮೀನುದಾರರು) ಅಗತ್ಯವಿರುವುದಿಲ್ಲ.
ಗರಿಷ್ಠ ಸಾಲದ ಮಿತಿ ಇಲ್ಲ: ವಿದ್ಯಾರ್ಥಿ ಪ್ರವೇಶ ಪಡೆದಿರುವ ಸಂಸ್ಥೆಯ ಶಿಕ್ಷಣ ಶುಲ್ಕ ಮತ್ತು ಇತರೆ ಅಗತ್ಯ ವೆಚ್ಚಗಳ ಆಧಾರದ ಮೇಲೆ ಸಂಪೂರ್ಣ ಧನಸಹಾಯವನ್ನು (100% Finance) ಒದಗಿಸಲಾಗುತ್ತದೆ.
ಕ್ರೆಡಿಟ್ ಗ್ಯಾರಂಟಿ: 7.5 ಲಕ್ಷ ರೂ.ವರೆಗಿನ ಸಾಲಕ್ಕೆ ಭಾರತ ಸರ್ಕಾರವೇ ಶೇ. 75 ರಷ್ಟು ಕ್ರೆಡಿಟ್ ಗ್ಯಾರಂಟಿ ನೀಡುತ್ತದೆ.
ಬಡ್ಡಿ ಸಬ್ಸಿಡಿ ಸೌಲಭ್ಯ
ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 4.5 ಲಕ್ಷ ರೂ.ಗಿಂತ ಕಡಿಮೆ ಇದ್ದರೆ ತಾಂತ್ರಿಕ/ವೃತ್ತಿಪರ ಕೋರ್ಸ್‌ಗಳಿಗೆ ಮೊರಟೋರಿಯಂ ಅವಧಿಯಲ್ಲಿ (ಕೋರ್ಸ್ ಮುಗಿಯುವವರೆಗೆ + 1 ವರ್ಷ) 100% ಬಡ್ಡಿ ಸಬ್ಸಿಡಿ ಸಿಗುತ್ತದೆ.
4.5 ಲಕ್ಷದಿಂದ 8 ಲಕ್ಷ ರೂ.ವರೆಗೆ ಕುಟುಂಬದ ಆದಾಯ ವಿದ್ಯಾರ್ಥಿಗಳಿಗೆ 10 ಲಕ್ಷ ರೂ.ವರೆಗಿನ ಸಾಲದ ಮೇಲೆ ಶೇ. 3 ರಷ್ಟು ಬಡ್ಡಿ ಸಬ್ಸಿಡಿ ದೊರೆಯುತ್ತದೆ. (ಇದು ಪ್ರತಿ ವರ್ಷ 1 ಲಕ್ಷ ವಿದ್ಯಾರ್ಥಿಗಳಿಗೆ ಲಭ್ಯವಿರುತ್ತದೆ).
ಅರ್ಹತೆಗಳು ಏನೇನು?
ಅರ್ಜಿದಾರರು ಭಾರತೀಯ ನಾಗರಿಕರಾಗಿರಬೇಕು. ದೇಶದ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ (Quality Higher Educational Institutions – QHEIs) ಅಂದರೆ NIRF ಶ್ರೇಯಾಂಕ ಹೊಂದಿರುವ ಟಾಪ್ ಸಂಸ್ಥೆಗಳು, ಐಐಟಿ (IIT), ಐಐಎಂ (IIM), ನಿಟ್ (NIT) ಮತ್ತು ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಮೆರಿಟ್ ಆಧಾರದ ಮೇಲೆ ಪ್ರವೇಶ ಪಡೆದಿರಬೇಕು. ಮ್ಯಾನೇಜ್ ಮೆಂಟ್ ಕೋಟಾದಡಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಇದು ಅನ್ವಯಿಸುವುದಿಲ್ಲ.
ಸಾಲದ ಮರುಪಾವತಿ ಅವಧಿ
ಕೋರ್ಸ್ ಮುಗಿದ ನಂತರ 1 ವರ್ಷದ ಸಡಿಲಿಕೆ ಅವಧಿ (Moratorium Period) ಇರುತ್ತದೆ. ಅದಾದ ನಂತರ ಗರಿಷ್ಠ 15 ವರ್ಷಗಳವರೆಗೆ ಸಾಲ ಮರುಪಾವತಿ ಮಾಡಲು ಅವಕಾಶವಿರುತ್ತದೆ. ವಿದ್ಯಾರ್ಥಿಗಳು ಬ್ಯಾಂಕುಗಳಿಗೆ ಅಲೆಯುವ ಅಗತ್ಯವಿಲ್ಲದೆ, ಸಂಪೂರ್ಣ ಡಿಜಿಟಲ್ ರೂಪದಲ್ಲಿ ಅರ್ಜಿ ಸಲ್ಲಿಸಬಹುದು. PM-Vidyalaxmi ಅಧಿಕೃತ ಪೋರ್ಟಲ್‌ಗೆ (pmvidyalaxmi.co.in) ಭೇಟಿ ನೀಡಿ CELAF (Common Education Loan Application Form) ಎಂಬ ಅರ್ಜಿಯನ್ನು ಸಲ್ಲಿಸಬಹುದು.



















