ಬೆಂಗಳೂರು : ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತ್ಯುತ್ತಮ ಅವಕಾಶ ನಿಮ್ಮದಾಗುತ್ತಿದೆ. ಪ್ರಸಿದ್ಧ ಯೋಗ ಸಂಸ್ಥೆಯಾದ ಹಬಿಲ್ಡ್ (Habuild) ವತಿಯಿಂದ ಇದೇ ಜೂನ್ 8 ರಿಂದ 21 ದಿನಗಳ ಉಚಿತ ಆನ್‌ಲೈನ್ ಯೋಗ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸರ್ಕಾರದಿಂದ ಮಾನ್ಯತೆ ಪಡೆದ ಖ್ಯಾತ ಯೋಗ ಶಿಕ್ಷಕ, ಐಐಟಿಯನ್ ಹಾಗೂ 14 ವರ್ಷಗಳ ಅನುಭವ ಹೊಂದಿರುವ ಸೌರಭ್ ಬೋತ್ರಾ ಅವರ ಮಾರ್ಗದರ್ಶನದಲ್ಲಿ ಈ ತರಬೇತಿ ನಡೆಯಲಿದೆ.

ಬೆಳಿಗ್ಗೆ 6:30, 7:30 ಮತ್ತು 8:30 ಗಂಟೆಗೆ ಹಾಗೂ ಸಂಜೆ 5:00, 6:00 ಮತ್ತು 7:00 ಗಂಟೆಗೆ ತರಗತಿಗಳು ಲಭ್ಯವಿದ್ದು, ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಮಯವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಮನೆಯಿಂದಲೇ ಆನ್‌ಲೈನ್ ಮೂಲಕ ಯೋಗಾಭ್ಯಾಸದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ.
ಈ ತರಬೇತಿಯಲ್ಲಿ ಭಾಗವಹಿಸುವುದರಿಂದ ಸಿಗುವ ಪ್ರಮುಖ ಪ್ರಯೋಜನಗಳು :
ಮನಸ್ಸಿಗೆ ಶಾಂತಿ
- ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.
- ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.
- ಉಸಿರಾಟ ತೊಂದರೆ ನಿವಾರಣೆ ಸಹಕಾರಿಯಾಗಲಿದೆ.
ದೇಹದ ಚಲನಾ ಸಾಮರ್ಥ್ಯ ವೃದ್ಧಿ
- ಸ್ನಾಯುಗಳ ನಮ್ಯತೆಯನ್ನು ಹೆಚ್ಚಿಸುತ್ತದೆ.
- ದೇಹದಲ್ಲಿನ ಬಿಗಿತ ಹಾಗೂ ಗಟ್ಟಿತನವನ್ನು ಕಡಿಮೆ ಮಾಡುತ್ತದೆ.
- ಕೀಲು ನೋವುಗಳನ್ನು ತಗ್ಗಿಸಲು ನೆರವಾಗುತ್ತದೆ.
ತೂಕ ನಿಯಂತ್ರಣ ಮತ್ತು ಫಿಟ್ನೆಸ್
- ಹೆಚ್ಚುವರಿ ಕ್ಯಾಲೊರಿಗಳನ್ನು ಕರಗಿಸಲು ಸಹಕಾರಿ.
- ತೂಕವನ್ನು ಸಮತೋಲನದಲ್ಲಿ ಇಡಲು ಸಹಕಾರಿಯಾಗುತ್ತದೆ.
- ದೇಹವನ್ನು ಬಲಿಷ್ಠಗೊಳಿಸುತ್ತದೆ.
‘HarGharYogaHarDinHoga’ ಎಂಬ ಧ್ಯೇಯದೊಂದಿಗೆ ನಡೆಯುತ್ತಿರುವ ಈ ಉಚಿತ 21 ದಿನಗಳ ಯೋಗ ಅಭಿಯಾನದಲ್ಲಿ ಭಾಗವಹಿಸಿ, ಆರೋಗ್ಯಕರ ಮತ್ತು ಸಂತೋಷಕರ ಜೀವನಶೈಲಿಯತ್ತ ಹೆಜ್ಜೆ ಇಡಿ.
ಈ ಲಿಂಕ್ ಕ್ಲಿಕ್ ಮಾಡಿ ನೊಂದಾಯಿಸಿಕೊಳ್ಳಿ – https://habit.yoga/Venkatesha_6jcye
ಇದನ್ನೂ ಓದಿ : ಬದಲಾಗಿವೆ ನಿಯಮಗಳು : ಯಾವಾಗೆಲ್ಲ ಪ್ಯಾನ್ ಕಾರ್ಡ್ ಕಡ್ಡಾಯ ಗೊತ್ತಾ?


















