ಉಡುಪಿ ; ಸ್ಯಾಂಡಲ್‌ವುಡ್‌ನ ಪ್ರಸಿದ್ಧ ತಾರಾ ದಂಪತಿಗಳಾದ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಅವರು ಉಡುಪಿಯ ಐತಿಹಾಸಿಕ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ತಮ್ಮ ವಿಶೇಷ ಹರಕೆಯನ್ನು ಭಕ್ತಿಯಿಂದ ತೀರಿಸಿದ್ದಾರೆ.

ಸುಮಾರು ಒಂದೂವರೆ ವರ್ಷದ ಹಿಂದೆ ತಾವು ಹೊತ್ತುಕೊಂಡಿದ್ದ ಹರಕೆಯ ಪ್ರಕಾರ,ದಂಪತಿಗಳು ತಮ್ಮ ಪುಟ್ಟ ಮಗನೊಂದಿಗೆ ಮಠದಲ್ಲಿ ಜನಸಾಮಾನ್ಯರಂತೆ ನೆಲದ ಮೇಲೆ ಕುಳಿತು ಪ್ರಸಾದ ಸ್ವೀಕರಿಸುವ ಮೂಲಕ ಸರಳತೆ ಮೆರೆದಿದ್ದಾರೆ.
ನಟ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ದಂಪತಿಗಳಿಗೆ ಒಂದೂವರೆ ವರ್ಷದ ಹಿಂದೆ ಮಗು ಜನಿಸಿತ್ತು.ತಮಗೆ ಮಗು ಹುಟ್ಟಿದರೆ ಉಡುಪಿಯ ಶ್ರೀ ಕೃಷ್ಣನ ಸನ್ನಿಧಿಯಲ್ಲಿ ‘ನೆಲಭೋಜನ’ (ನೆಲದ ಮೇಲೆ ಕುಳಿತು ಅನ್ನಪ್ರಸಾದ ಸ್ವೀಕರಿಸುವುದು) ಮಾಡುವುದಾಗಿ ದಂಪತಿಗಳು ವಿಶೇಷ ಹರಕೆ ಕಟ್ಟಿಕೊಂಡಿದ್ದರು. ಅದರಂತೆಯೇ, ಈಗ ತಮ್ಮ ಮುದ್ದಾದ ಮಗನಿಗೆ ಮೊದಲ ಬಾರಿಗೆ ಉಡುಪಿ ಶ್ರೀ ಕೃಷ್ಣ ಹಾಗೂ ಮುಖ್ಯಪ್ರಾಣ ದೇವರ ದರ್ಶನ ಮಾಡಿಸಿ, ಹರಕೆ ತೀರಿಸಿ ದಂಪತಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಸೆಲೆಬ್ರೇಷನ್ ವೇಳೆ ಹಲವೆಡೆ RCB ಫ್ಯಾನ್ಸ್ ಹುಚ್ಚಾಟ – ಪೊಲೀಸರಿಂದ ಲಾಠಿ ಚಾರ್ಜ್!



















