ಕೋಲಾರ : ಪೆಂಡಾಲ್ ಮೇಲೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ 7 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಕೋಲಾರ ನಗರದ ಪುಲ್ ಷಾ ಮೊಹಲ್ಲಾದಲ್ಲಿ ಕಳೆದ ರಾತ್ರಿ ನಡೆದಿದೆ.
ಮಳೆಯಿಂದಾಗಿ ವಿದ್ಯುತ್ ಕಂಬದಿಂದ ತುಂಡಾಗಿ ಕೆಳಗೆ ಬಿದ್ದಿದ್ದ ತಂತಿ ತಗುಲಿ ಸಯ್ಯದ್ ರೆಹಮಾನ್ (4) ಬಾಲಕ ಸಾವನ್ನಪ್ಪಿದ್ದಾನೆ. ಮತ್ತೆ ಮೂರು ಮಕ್ಕಳಿಗೂ ಶಾಕ್ ಹೊಡೆದಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ.
ವಿದ್ಯುತ್ ತಂತಿ ಸ್ಪರ್ಶಿಸಿಸುತ್ತಿದ್ದಂತೆ ಅಲ್ಲಿದ್ದವರು ಶಾಕ್‌ನಿಂದ ಬಿದ್ದ ಮಕ್ಕಳನ್ನ ಪಾರು ಮಾಡಿದ್ದಾರೆ. ಆದರೆ, ನಾಲ್ಕು ವರ್ಷದ ಸಯ್ಯದ್ ರೆಹಮಾನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇಷ್ಟೆಲ್ಲಾ ಅನಾಹುತಕ್ಕೆ ವಿದ್ಯುತ್ ತಂತಿಗಳು ಪದೇ ಪದೇ ಕೆಳಗೆ ಬಿದ್ದರೂ ಸರಿಪಡಿಸದ ಬೆಸ್ಕಾಂ ನಿರ್ಲಕ್ಷ್ಯವೇ ಕಾರಣ. ಈ ಹಿಂದೆಯೂ ಹಲವು ಬಾರಿ ದೂರು ಕೊಟ್ಟರೂ ಸರಿಪಡಿಸಲಿಲ್ಲ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : ಕ್ಷುಲ್ಲಕ ಕಾರಣಕ್ಕೆ ನಡುರಸ್ತೆಯಲ್ಲೇ ಹೊಡೆದಾಡಿಕೊಂಡ ವಿದ್ಯಾರ್ಥಿಗಳು.. ವಿಡಿಯೋ ವೈರಲ್!


















