ದಾವಣಗೆರೆ : ಕರ್ನಾಟಕದ ಹಲೆವೆಡೆ ಭಾರಿ ಗಾಳಿ ಮಳೆ, ಸಿಡಿಲು ಅಬ್ಬರಿಸುತ್ತಿದೆ. ಹೆಲೆವೆಡೆ ಈಗಾಗಲೇ ಆಲಿಕಲ್ಲು ಮಳೆ ಸುರಿದಿದೆ. ಇತ್ತ ಭಾರಿ ಸಿಡಿಲಿಗೆ ಜಾನುವಾರುಗಳು ಮೃತಪಟ್ಟಿದೆ. ಇದೀಗ ಶಾಲೆಯ ಮುಖ್ಯೋಪಾದ್ಯಾಯರೊಬ್ಬರು ಸಿಡಿಲಿನ ಅಬ್ಬರಕ್ಕೆ ಕುಸಿದು ಬಿದ್ದು ಹೃದಯಘಾತದಿಂದ ಮೃತಪಟ್ಟ ಘಟನೆ ನಡೆದಿದೆ.
ಏಕಾಏಕಿ ಆರಂಭಗೊಂಡ ಗುಡುಗು ಸಿಡಿಲಿನ ಆರ್ಭಟಕ್ಕೆ ಮನೆ ಮುಂದೆ ನಿಂತಿದ್ದ ಶಿಕ್ಷಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಹೊನ್ನಾಳಿ ತಾಲೂಕಿನ ಮಲೆಕುಂಬಳೂರು ಗ್ರಾಮದಲ್ಲಿ ನಡೆದಿದೆ.
ಮಲೆಕುಂಬಳೂರು ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ನಾಗರಾಜಪ್ಪ (56) ಮೃತ ದುರ್ದೈವಿ. ಮೇ 17ರ ರಾತ್ರಿ ನಾಗರಾಜಪ್ಪ ಮನೆಯ ಮುಂದೆ ನಿಂತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಸಿಡಿಲು ಬಡಿದಿದೆ. ಆ ಶಬ್ದಕ್ಕೆ ಬೆಚ್ಚಿ, ಹೃದಯಾಘಾತವಾಗಿದೆ ಎನ್ನಲಾಗಿದೆ. ಸ್ಥಳದಲ್ಲೇ ಅವರು ಸಾವನ್ನಪ್ಪಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ : ನಾಳೆಯಿಂದ ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ ಫಿಕ್ಸ್ : ಸಂಧಾನ ಸಭೆ ವಿಫಲ!



















