ಉಡುಪಿ : ಕಳೆದ ಕೆಲವು ದಿನಗಳಿಂದ ಭಾರೀ ಬಿಸಿಲಿನಿಂದ ಕಂಗೆಟ್ಟಿದ್ದ ಉಡುಪಿ ಜನತೆಗೆ ಗುರುವಾರ ಸುರಿದ ಮಳೆ ಕೊನೆಗೂ ತಂಪು ತಂದಿದೆ. ಉಷ್ಣಾಂಶ ಏರಿಕೆಯಿಂದ ಬೇಸತ್ತಿದ್ದ ಜನರು ಮಳೆಯ ಆಗಮನದಿಂದ ನಿಟ್ಟುಸಿರು ಬಿಟ್ಟಿದ್ದಾರೆ.
ಹವಾಮಾನ ಇಲಾಖೆ ಮುನ್ಸೂಚನೆಯಂತೆ ಬೆಳಗ್ಗೆಯಿಂದಲೇ ಉಡುಪಿ ನಗರದಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಬಿಸಿಲಿನ ತಾಪದಿಂದ ಬಳಲುತ್ತಿದ್ದ ಜನರು ಮಳೆಯ ನಿರೀಕ್ಷೆಯಲ್ಲಿದ್ದ ವೇಳೆ ಮಧ್ಯಾಹ್ನದ ಬಳಿಕ ವರುಣ ದೇವ ಕೃಪೆ ತೋರಿದ್ದಾನೆ.
ನಗರ ಸೇರಿದಂತೆ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ಇದರಿಂದ ಉಷ್ಣಾಂಶದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಮಳೆಯ ತಂಪಾದ ವಾತಾವರಣದಿಂದ ಜನರು ನಿರಾಳತೆ ಅನುಭವಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ತೀವ್ರ ಬಿಸಿಲು ಹಾಗೂ ಬಿಸಿ ಗಾಳಿಯಿಂದ ಜನಜೀವನ ಅಸ್ತವ್ಯಸ್ತವಾಗಿತ್ತು. ಇದೀಗ ಸುರಿದ ಮಳೆಯಿಂದ ವಾತಾವರಣ ಸಂಪೂರ್ಣ ಬದಲಾಗಿದ್ದು, ಜನರು ಖುಷಿಪಟ್ಟಿದ್ದಾರೆ.
ಇದನ್ನೂ ಓದಿ : 25 ವರ್ಷಗಳ ಕನಸು ಕೊನೆಗೂ ನನಸು – ಮಟಪಾಡಿಯಲ್ಲಿ ನೂತನ ಸಾರಿಗೆ ಬಸ್ಸಿಗೆ ಸಂಭ್ರಮದ ಸ್ವಾಗತ!


















