ಉಡುಪಿ : ಬೈಂದೂರಿನಲ್ಲಿ ಶತಮಾನದ ಹಿನ್ನೆಲೆ ಹೊಂದಿರುವ ಪ್ರಸಿದ್ದ ನಾಕಟ್ಟೆಮನೆ ಹೆಬ್ಬಾಗಿಲು ಉದ್ಘಾಟನೆ ಕಾರ್ಯಕ್ರಮ ನಾಕಟ್ಟೆಯಲ್ಲಿ ಸಂಭ್ರಮದ ವಾತಾವರಣದಲ್ಲಿ ಅದ್ದೂರಿಯಾಗಿ ಸಂಪನ್ನಗೊಂಡಿತು.
ಈ ಪವಿತ್ರ ಕಾರ್ಯಕ್ರಮವನ್ನು ಉಡುಪಿ ಪೇಜಾವರ ಮಠದ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಉದ್ಘಾಟಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಕರಾವಳಿಯ ಅನೇಕ ಹಿರಿಯ ಮನೆತನಗಳು ತಮ್ಮ ಸಾಂಪ್ರದಾಯ ಮತ್ತು ಧಾರ್ಮಿಕ ಆಚರಣೆಗಳ ಮೂಲಕ ಇಂದಿಗೂ ಹಿರಿಮೆಯನ್ನು ಉಳಿಸಿಕೊಂಡಿವೆ. ತಲೆತಲಾಂತರಗಳಿಂದ ಕುಟುಂಬಗಳು ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯಗಳು ಮನೆತನದ ಗೌರವವನ್ನು ಹೆಚ್ಚಿಸುತ್ತವೆ. ಹೆಬ್ಬಾಗಿಲು ಮನೆತನದ ಗೌರವದ ಸಂಕೇತವಾಗಿದ್ದು, ಬೈಂದೂರಿನ ನಾಕಟ್ಟೆ ಕುಟುಂಬ ಇಂತಹ ಪರಂಪರೆಯನ್ನು ಮುಂದುವರಿಸುತ್ತಿರುವುದು ಊರಿಗೆ ಕೀರ್ತಿ ತಂದಿದೆ ಎಂದು ಸ್ವಾಮೀಜಿಗಳು ಹೇಳಿದರು.

ನಾಕಟ್ಟೆ ಕುಟುಂಬದ ಆನಂದ ಎನ್. ಶೆಟ್ಟಿ ಮಾತನಾಡಿ, ನಾಕಟ್ಟೆ ಹೆಬ್ಬಾಗಿಲುಮನೆ ದಾನಧರ್ಮದಲ್ಲಿ ಪ್ರಸಿದ್ಧವಾಗಿತ್ತು. ಶಿರಸಿ, ಕುಂದಾಪುರ, ಉಡುಪಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಇದು ಆಶ್ರಯವಾಗಿತ್ತು ಎಂದು ಸ್ಮರಿಸಿದರು. ರಾತ್ರಿ ವೇಳೆ ಬಸ್ ವ್ಯವಸ್ಥೆ ಇಲ್ಲದ ಕಾಲದಲ್ಲಿ ಪ್ರಯಾಣಿಕರಿಗೆ ಊಟ ಮತ್ತು ವಸತಿ ನೀಡುತ್ತಿದ್ದ ಮಾನವೀಯ ಮನೆ ಇದಾಗಿತ್ತು. ಅನೇಕ ಜನರ ಜೀವನದಲ್ಲಿ ಮರೆಯಲಾಗದ ನೆನಪುಗಳನ್ನು ಮೂಡಿಸಿದ ಈ ಮನೆ, ಇಂದು ಪುನರ್ಜನ್ಮ ಪಡೆದಿರುವುದು ಸಂತೋಷ ತಂದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ CA ಪರೀಕ್ಷೆಯಲ್ಲಿ ಉತ್ತೀರ್ಣರಾದ ನಾಕಟ್ಟೆ ಕುಟುಂಬದ ಆನಂದ ಶೆಟ್ಟಿಯವರ ಪುತ್ರ ಮಂದಾರ ಎ. ಶೆಟ್ಟಿಯನ್ನು ಸ್ವಾಮೀಜಿಗಳು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ವತ್ತಿನಣೆ ರಾಘವೇಂದ್ರ ಸ್ವಾಮಿ ಮಠ (ಕಿರುಮಂತ್ರಾಲಯ) ಅಧ್ಯಕ್ಷ ಸೂಲಿಯಣ್ಣ ಶೆಟ್ಟಿ, ಬೈಂದೂರು ಯಡ್ತರೆಯ ಕೋಟಿ ಚೆನ್ನಯ್ಯ ಗರಡಿಯ ಅಧ್ಯಕ್ಷ ಎಸ್. ರಾಜು ಪೂಜಾರಿ, ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರೀಶ್, ಬೈಂದೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಜಗನ್ನಾಥ ಶೆಟ್ಟಿ ನಾಕಟ್ಟೆ, ಬೈಂದೂರು ವತ್ತಿನಕಟ್ಟೆ ಮಹಾಸತಿ ಅಮ್ಮನವರ ದೇವಸ್ಥಾನದ ಅಧ್ಯಕ್ಷ ನಾಗರಾಜ ಶೆಟ್ಟಿ ನಾಕಟ್ಟೆ, ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಧಿಕಾರಿ ಸುಧಾಕರ ಶೆಟ್ಟಿ ಇಂದ್ರಾಳಿ, ಡಿಯರ್ ಕನ್ಸಕ್ಷನ್ ಹುಬ್ಬಳ್ಳಿ ಕೆ.ಆರ್. ಶೆಟ್ಟಿ, ಆರ್.ಎನ್. ಶೆಟ್ಟಿ ಕಂಪನಿ ಹುಬ್ಬಳ್ಳಿ ನಿರ್ದೇಶಕ ಕೆ. ಆನಂದ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಹಾಗೆಯೇ ನಾಕಟ್ಟೆ ಹೆಬ್ಬಾಗಿಲು ಮನೆ ಕುಟುಂಬದ ಪ್ರಮುಖರಾದ ರಘುರಾಮ ಶೆಟ್ಟಿ, ದುಗ್ಗಪ್ಪ ಶೆಟ್ಟಿ, ಆನಂದ ಶೆಟ್ಟಿ, ಗೋಪಾಲ ಶೆಟ್ಟಿ, ಗಿರಿಜಾ ಶೆಟ್ಟಿ, ನಾಗಮ್ಮ ಶೆಟ್ಟಿ ಹಾಗೂ ಕುಟುಂಬಸ್ಥರು ಭಾಗವಹಿಸಿದ್ದರು. ನಾಗರಾಜ್ ಎನ್. ಶೆಟ್ಟಿ ಕಾರ್ಯಕ್ರಮದಲ್ಲಿ ಗಣ್ಯರನ್ನು ಸ್ವಾಗತಿಸಿದರು. ಶಿಕ್ಷಕ ಸುಧಾಕರ್ ಪಿ. ಬೈಂದೂರು ಕಾರ್ಯಕ್ರಮ ನಿರೂಪಿಸಿದರು. ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ವಂದಿಸಿದರು.
ಇದನ್ನೂ ಓದಿ : “ದುಷ್ಮನ್ ಬಗಲ್ ಮೇ ಹೈ” – ಸಚಿವ ಜಮೀರ್ ಮನೆಯಲ್ಲೇ ಚಿನ್ನ ದೋಚಿದ ಸಂಬಂಧಿಕರು ಅರೆಸ್ಟ್!



















