ಚೆನ್ನೈ : ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ ಅವರು ಇಂದು ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂಭ್ರಮದ ಅಂಗವಾಗಿ ಅವರು ತಿರುಪತಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದು, ಇದರ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವಿಶೇಷವೆಂದರೆ, ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬರುತ್ತಿರುವ ದಿನವೇ ತ್ರಿಶಾ ದೇವಸ್ಥಾನಕ್ಕೆ ಭೇಟಿ ನೀಡಿರುವುದು ಅಭಿಮಾನಿಗಳಲ್ಲಿ ಹೊಸ ಕುತೂಹಲ ಮೂಡಿಸಿದೆ.
ದೈವದ ಮೊರೆ ಹೋದ ನಟಿ: ವಿಜಯ್ ಕನೆಕ್ಷನ್?
ತಮಿಳುನಾಡು ಚುನಾವಣಾ ಫಲಿತಾಂಶದಲ್ಲಿ ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಆರಂಭಿಕ ಟ್ರೆಂಡ್‌ಗಳಲ್ಲಿ ಭರ್ಜರಿ ಮುನ್ನಡೆ ಸಾಧಿಸುತ್ತಿದೆ. ಈ ಐತಿಹಾಸಿಕ ಕ್ಷಣಕ್ಕೂ ಮುನ್ನವೇ ತ್ರಿಶಾ ತಿರುಪತಿಗೆ ಭೇಟಿ ನೀಡಿರುವುದು ಸುಮ್ಮನೆಯಲ್ಲ ಎಂಬ ಚರ್ಚೆ ಎಕ್ಸ್ (ಟ್ವಿಟರ್) ಸೇರಿದಂತೆ ಇತರೆ ವೇದಿಕೆಗಳಲ್ಲಿ ಜೋರಾಗಿದೆ. ಆಪ್ತ ಗೆಳೆಯ ಮತ್ತು ಸಹನಟ ವಿಜಯ್ ಅವರ ರಾಜಕೀಯ ಯಶಸ್ಸಿಗಾಗಿ ತ್ರಿಶಾ ತಿಮ್ಮಪ್ಪನ ಮೊರೆ ಹೋಗಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್‌ಗಳ ಮೂಲಕ ಊಹಿಸುತ್ತಿದ್ದಾರೆ.
ಚುನಾವಣೆ ಫಲಿತಾಂಶದ ಕ್ಷಣಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ – https://www.youtube.com/watch?v=Nb20pfCzHUA
ಗುಟ್ಟಾಗಿ ನಡೆದ ದರ್ಶನ: ವೈರಲ್ ಆಯ್ತು ವಿಡಿಯೋ
ಭಾನುವಾರ ರಾತ್ರಿಯೇ ತ್ರಿಶಾ ತಿರುಪತಿ ಪ್ರಯಾಣದ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಇಂದು ಬೆಳಗ್ಗೆ ಅವರು ಯಾವುದೇ ಅಬ್ಬರವಿಲ್ಲದೆ ಸಾಮಾನ್ಯ ಭಕ್ತೆಯಂತೆ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ದೃಶ್ಯಗಳು ಕಂಡುಬಂದಿವೆ. ಇತ್ತೀಚೆಗಷ್ಟೇ ವಿಜಯ್ ಅವರ ವಿಚ್ಛೇದನದ ವಾರ್ತೆಗಳ ನಡುವೆ, ಸಾರ್ವಜನಿಕವಾಗಿ ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು ಭಾರೀ ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ವಿಜಯ್ ಅವರ ರಾಜಕೀಯ ಭವಿಷ್ಯದ ನಿರ್ಣಾಯಕ ದಿನದಂದೇ ತ್ರಿಶಾ ದೇಗುಲಕ್ಕೆ ಭೇಟಿ ನೀಡಿರುವುದು ವಿಶೇಷ ಮಹತ್ವ ಪಡೆದುಕೊಂಡಿದೆ.
ಮತದಾನದ ಸಮಯದಲ್ಲೂ ಬೆಂಬಲದ ಸುಳಿವು
ಕಳೆದ ಏಪ್ರಿಲ್ 23ರಂದು ಮತದಾನ ಮಾಡಿದ ನಂತರ ತ್ರಿಶಾ ಹಂಚಿಕೊಂಡಿದ್ದ ಫೋಟೋ ಕೂಡ ವಿಜಯ್ ಬೆಂಬಲದ ಸುಳಿವು ನೀಡುವಂತಿತ್ತು ಎಂದು ಅಭಿಮಾನಿಗಳು ಈ ಹಿಂದೆಯೇ ವಿಶ್ಲೇಷಿಸಿದ್ದರು. ಈಗ ಚುನಾವಣಾ ಫಲಿತಾಂಶದ ದಿನದಂದೇ ತ್ರಿಶಾ ಮತ್ತು ಟಿವಿಕೆ ಎರಡೂ ಕಡೆ ಶುಭ ಸುದ್ದಿಗಳು ಕೇಳಿಬರುತ್ತಿವೆ. ಒಂದು ಕಡೆ ತ್ರಿಶಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದರೆ, ಮತ್ತೊಂದು ಕಡೆ ಚುನಾವಣಾ ಕಣದಲ್ಲಿ ವಿಜಯ್ “ವಿಜಯ” ಪಥದತ್ತ ಸಾಗುತ್ತಿದ್ದಾರೆ. ಒಟ್ಟಿನಲ್ಲಿ ಸಿನಿಮಾದಂತೆ ಈ ಜೋಡಿಯ ‘ಆಫ್ ಸ್ಕ್ರೀನ್’ ಬಾಂಡಿಂಗ್ ಈಗ ರಾಜಕೀಯ ಮತ್ತು ಮನರಂಜನಾ ಲೋಕದಲ್ಲಿ ಹಾಟ್ ಟಾಪಿಕ್ ಆಗಿದೆ.
ಇದನ್ನೂ ಓದಿ : ಕೇರಳದಲ್ಲಿ UDF ಅಲೆ ; ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ಶುರು.. ಶಶಿ ತರೂರ್ ಹೇಳಿದ್ದೇನು?


















